ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ನ್ಯಾಯಾಲಯದ ಕಲಾಪವನ್ನು ವರದಿ ಮಾಡಲು ಬರುವ ಪತ್ರಕರ್ತರು ಟೀ- ಶರ್ಟ್ ಮತ್ತು ಜೀನ್ಸ್ ಹಾಕಿಕೊಂಡು ಬರಬಾರದು ಎಂದು ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿ (ಡಿ.22): ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ನ್ಯಾಯಾಲಯದ ಕಲಾಪವನ್ನು ವರದಿ ಮಾಡಲು ಬರುವ ಪತ್ರಕರ್ತರು ಟೀ- ಶರ್ಟ್ ಮತ್ತು ಜೀನ್ಸ್ ಹಾಕಿಕೊಂಡು ಬರಬಾರದು ಎಂದು ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಚೆಲ್ಲೂರ್, ‘ಕೋರ್ಟ್ ನ್ಯಾಯಾಂಗದ ಒಂದು ದೇವಾಲಯ ಇದ್ದಂತೆ. ಅಲ್ಲಿಗೆ ಬರುವವರು ಸಭ್ಯವಾಗಿ ಉಡುಗೆ ಧರಿಸಿರಬೇಕು. ಪತ್ರಕರ್ತರು ಹೇಗೆ ಟೀ- ಶರ್ಟ್ ಮತ್ತು ಜೀನ್ಸ್ ತೊಟ್ಟು ಕೋರ್ಟ್‌ಗೆ ಬರಲು ಸಾಧ್ಯ? ವಕೀಲರು ಮತ್ತು ನ್ಯಾಯಾಧೀಶರಿಗೆ ವಸ್ತ್ರ ಸಂಹಿತೆ ಇರುತ್ತದೆ.
ಆದರೆ, ಇತರರೂ ಹಾಗೇ ಇರಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಆದರೆ, ಸಭ್ಯವಾದ ಉಡುಗೆಗಳನ್ನು ತೊಟ್ಟು ಕೋರ್ಟ್‌ಗೆ ಬರಬೇಕು’ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪತ್ರಿಕೆಯ ಪತ್ರಕರ್ತರೊಬ್ಬರು ಟೀ- ಶರ್ಟ್ ಮತ್ತು ಜೀನ್ಸ್ ತೊಟ್ಟು ನ್ಯಾಯಾಲಯದ ವರದಿ ಮಾಡಲು ಬಂದಿದ್ದನ್ನು ಮಾ.29ರಂದು ಚೆಲ್ಲೂರ್ ಪ್ರಶ್ನಿಸಿದ್ದರು.
