Asianet Suvarna News Asianet Suvarna News

ರಾಷ್ಟ್ರಪತಿ ಚುನಾವಣೆ: ಕೋವಿಂದ್’ಗೆ ಜೆಡಿಯು ಬೆಂಬಲ

ರಾಷ್ಟ್ರಪತಿ ಹುದ್ದೆಗೆ ರಾಮನಾತ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಎಲ್ಲಾ ನಾಯಕರು ನಿರ್ಧರಿಸಿದ್ದಾರೆ. ಕೋವಿಂದ್  ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಬಿಹಾರದ ಮೊದಲ ರಾಜ್ಯಪಾಲರಾಗಿದ್ದಾರೆ. ಇದು ನಮಗೆಲ್ಲರಿಗೆ ಸಂತಸದ ವಿಷಯವಲ್ಲದೇ,  ಬಿಹಾರದ ಅಭಿವೃದ್ಧಿಗೂ ಕೂಡ ಮಹತ್ವಕಾರಿಯಾಗಿದೆ, ಎಂದು ಜೆಡಿಯು ನಾಯಕ ರತ್ನೇಶ್ ಸಾದಾ ಹೇಳಿದ್ದಾರೆ.

JDU to support Kovind for president
  • Facebook
  • Twitter
  • Whatsapp

ಪಾಟ್ನಾ: ರಾಷ್ಟ್ರಪತಿ ಚುನಾವಣೆ ರಂಗೇರುತ್ತಿದ್ದು, ಎನ್’ಡಿಏ ಅಭ್ಯರ್ಥಿ ರಾಮನಾಥ್ ಕೋವಿಂದ್’ಗೆ ಜನತಾ ದಳ ಯುನೈಟೆಡ್ (ಜೆಡಿಯು) ಬೆಂಬಲಿಸುವುದಾಗಿ ಹಹೇಳಿದೆ.

ರಾಷ್ಟ್ರಪತಿ ಹುದ್ದೆಗೆ ರಾಮನಾತ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಎಲ್ಲಾ ನಾಯಕರು ನಿರ್ಧರಿಸಿದ್ದಾರೆ. ಕೋವಿಂದ್  ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಬಿಹಾರದ ಮೊದಲ ರಾಜ್ಯಪಾಲರಾಗಿದ್ದಾರೆ. ಇದು ನಮಗೆಲ್ಲರಿಗೆ ಸಂತಸದ ವಿಷಯವಲ್ಲದೇ,  ಬಿಹಾರದ ಅಭಿವೃದ್ಧಿಗೂ ಕೂಡ ಮಹತ್ವಕಾರಿಯಾಗಿದೆ, ಎಂದು ಜೆಡಿಯು ನಾಯಕ ರತ್ನೇಶ್ ಸಾದಾ ಹೇಳಿದ್ದಾರೆ.

ಇಂದು ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಬಹುತೇಕ ಲ್ಲಾ ಶಾಸಕರು ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆಂದು ಸಾದಾ ಹೇಳಿದ್ದಾರೆ.  

ಜೆಡಿಯು ಈ ನಡೆಯು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ. ರಾಷ್ಷ್ರಪತಿ ಅಭ್ಯರ್ಥಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಾಳೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

Follow Us:
Download App:
  • android
  • ios