ಮುಂಬರುವ ಆ.19ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎನ್’ಡಿಏ ಸೇರುವ ನಿರ್ಧಾರವನ್ನು ನಿತೀಶ್ ಕುಮಾರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ನಿತೀಶ್ ನಡುವೆ ನಡೆದ ಸಭೆಯಲ್ಲಿ, ಎನ್’ಡಿಏ ಸೇರಲು ನಿತೀಶ್ ಕುಮಾರ್’ರನ್ನು ಅಧಿಕೃತವಾಗಿ ಅಮಿತ್ ಶಾ ಆಹ್ವಾನಿಸಿದ್ದಾರೆ.

ಪಾಟ್ನಾ: ಮುಂಬರುವ ಆ.19ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎನ್’ಡಿಏ ಸೇರುವ ನಿರ್ಧಾರವನ್ನು ನಿತೀಶ್ ಕುಮಾರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.

ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ನಿತೀಶ್ ನಡುವೆ ನಡೆದ ಸಭೆಯಲ್ಲಿ, ಎನ್’ಡಿಏ ಸೇರಲು ನಿತೀಶ್ ಕುಮಾರ್’ರನ್ನು ಅಧಿಕೃತವಾಗಿ ಅಮಿತ್ ಶಾ ಆಹ್ವಾನಿಸಿದ್ದಾರೆ.

ಎನ್’ಡಿಏ ಸೇರುವುದರಿಂದ ಕೇಂದ್ರದ ಜೊತೆ ಸೇರಿ ಬಿಹಾರದ ಅಭಿವೃದ್ಧಿಗೆ ಕೆಲಸ ಮಾಡಬಹುದು ಎಂದು ಜೆಡಿಯು ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.

ನಿತೀಶ್ ಕುಮಾರ್’ರನ್ನು ಎನ್’ಡಿಏಯ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲಾಗುವುದು ಎಂದು ನಿತೀಶ್ ಆಪ್ತ ವಲಯವು ಹೇಳಿದೆ ಎಂದು ನ್ಯೂಸ್18 ವರದಿ ಮಾಡಿದೆ.

ಈ ಹಿಂದೆ ಜಾರ್ಜ್ ಫೆರ್ನಾಂಡಿಸ್ ಹಾಗೂ ಶರದ್ ಯಾದವ್ ಈ ಹೊಣೆಗಾರಿಕೆ ಯನ್ನು ನಿಭಾಯಿಸಿದ್ದರು.

ಜತೆಗೆ ಜೆಡಿಯು’ನ ಇಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಕೂಡಾ ಹೇಳಲಾಗಿದೆ.