ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ ನಂತರ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.  ಸ್ಪೀಕರ್ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ 11 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಜೆಡಿಎಸ್ ಮೂವರು ಶಾಸಕರನ್ನು ಸೋಶಿಯಲ್ ಮೀಡಿಯಾದಲ್ಲಿ ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಪರಿ ಮಾತ್ರ ವಿಚಿತ್ರವಾಗಿದೆ.

ಬೆಂಗಳೂರು[ಜು.28]: ‘ಜೆಡಿಎಸ್ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿಯೇ ಭಾನುವಾರದ ಬಾಡೂಟ ಮಾಡಿದ್ದಾರೆ’ ಕೋಳಿಗಳಿಗೆ ಜೆಡಿಎಸ್ ಶಾಸಕರ ಹೆಸರಿನ ಟ್ಯಾಗ್ ಹಾಕಿ ಭಾನುವಾರ ಬಾಡೂಟಕ್ಕೆ ಕರೆಯೋಲೆ ನೀಡಿದ್ದಾರೆ!

ಅನರ್ಹಗೊಂಡ 17 ಶಾಸಕರ ಪಟ್ಟಿ

ಹೂಣಸೂರು ಶಾಸಕ ಎಚ್‌. ವಿಶ್ವನಾಥ್, ಕೆಆರ್‌ ಪೇಟೆ ನಾರಾಯಣ ಗೌಡ ಮತ್ತು ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಅವರ ಹೆಸರನ್ನು ಬರೆದು ಮೂರು ಕೋಳಿಗಳ ಕುತ್ತಿಗೆಗೆ ಕಟ್ಟಲಾಗಿದೆ.