ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ  50 ಸಾವಿರ ಹಣವನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ.  

ಬಾಗಲಕೋಟೆ (ಏ. 07): ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ 50 ಸಾವಿರ ಹಣವನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಧೋಳದಲ್ಲಿ ಎಚ್.ಡಿ.ಕೆ ಸಮ್ಮುಖದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಯ ಜೇಬು ಕತ್ತರಿಸಿ 50 ಸಾವಿರ ಹಣವನ್ನು ಕದ್ದೊಯ್ದಿದ್ದಾರೆ. ಜೆಡಿಎಸ್’ನ ಬೀಳಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎ.ಬಿ‌.ಬಳ್ಳೂರ ಅವರ ಹಣವನ್ನು ಕಳುವು ಮಾಡಲಾಗಿದೆ. ಸಮಾವೇಶ ಮುಗಿಸಿ ವೇದಿಕೆಯಿಂದ ಕೆಳಗಡೆ ಇಳಿಯುವ ವೇಳೆ ಈ ಘಟನೆ ನಡೆದಿದೆ.