ಬೆಂಗಳೂರು, [ಜೂ.29]: ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್ ​.ಡಿ.ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸಕ್ರಿಯಾವಾಗಿ ರಾಜಕೀಯದಲ್ಲಿ ಇರಲು ಗೌಡ್ರು ಇಚ್ಛಿಸಿದ್ದು, ಚುನಾವಣೆ ಸ್ಪರ್ಧೆಯಿಂದ ಮಾತ್ರ ಹಿಂದೆ ಸರಿದಿದ್ದಾರೆ.

ತುಮಕೂರಿನಲ್ಲಿ ದೇವೇಗೌಡ್ರ ಸೋಲಿಗೆ ಕಾರಣ ಸಿಕ್ತು ನೋಡಿ ..!

ಇಂದು [ಶನಿವಾರ] ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ್ರು, ನನ್ನ ರಾಜಕೀಯ ಜೀವನದಲ್ಲಿ ಎಂದೂ ನಾನು ಕುಟುಂಬ ರಾಜಕಾರಣ ‌ಮಾಡಿಲ್ಲ. ಆದ್ರೆ ಕಳೆದ ಲೊಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ನಿಲ್ಲಬೇಕಾದ ಪರಿಸ್ಥಿತಿ ಬಂತು ಎಂದು ಕುಟುಂಬ ರಾಜಕಾರಣ ಆರೋಪಕ್ಕೆ ಸ್ಪಷ್ಟನೆ ನೀಡಿದರು. 

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದನ್ನೂ ನಾನು ಗಮನಿಸಿದ್ದೇನೆ. ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಇದೂವರೆಗೂ ಪಕ್ಷ ಸಂಘಟನೆಗಾಗಿ ಸಾಕಷ್ಟು ದುಡಿದಿದ್ದೇನೆ. ಹಿಂದುಳಿದವರು, ಅಲ್ಪಸಂಖ್ಯಾತರನ್ನೂ ಗುರುತಿಸಿದ್ದೇನೆ ಎಂದು ಹೇಳಿದರು. 

ಜೆಡಿಎಸ್‌ನಿಂದ ರಾಜ್ಯಾದ್ಯಂತ ಪಾದಯಾತ್ರೆ: ಯಾವಾಗ?, ಎಲ್ಲಿಂದ -ಎಲ್ಲಿಗೆ..?

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ,  ತಮ್ಮ ತವರು ಜಿಲ್ಲೆ ಹಾಸನವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಧಾರೆಯೆರೆದು ತುಮಕೂರಿಗೆ ಹೋಗಿದ್ದರು. ಆದ್ರೆ, ಬಿಜೆಪಿ ಅಭ್ಯರ್ಥಿವಿರುದ್ಧ ಹೀನಾಯವಾಗಿ ಸೋಲುಕಂಡಿದ್ದರು. ಈ ಸೋಲಿನ ಮೂಲಕ ಗೌಡ್ರು ಈಗ ಚುನಾವಣೆಗೆ ನಿಲ್ಲುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. 

ವಯಸ್ಸಾಯಿತು  ಚುನಾವಣೆಗೆ ನಿಲ್ಲುವುದಿಲ್ಲ ಎಂದು ದೇವೇಗೌಡ್ರು ಹೇಳಿರುವುದು ಇದೇನು ಮೊದಲಲ್ಲ. ಈ ಹಿಂದೆ ಹಲವರು ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೂ ಚುನಾವಣೆಗೆ ಸ್ಪರ್ಧೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.