ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಂಕಲ್ಪ ತೊಟ್ಟಿರುವ ಜೆಡಿಎಸ್ ಪಕ್ಷವು ಈಗ ಭಿನ್ನಮತೀಯರ ಬವಣೆಯಿಂದ ಪಾಠ ಕಲಿತಂದಿದ್ದು, ಸಾಮೂಹಿಕ ನಾಯಕತ್ವಕ್ಕಾಗಿ ತಹತಹಿಸುತ್ತಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ದೇವೇಗೌಡರು ಕೂಡ ಸಾಮೂಹಿಕ ನಾಯಕತ್ವದ ಕುರಿತು ಮಾತನಾಡಿದರು. ಎರಡು ರಾಷ್ಟ್ರೀಯ ಪಕ್ಷಗಳು ವೇಗವಾಗಿ ಮುನ್ನುಗ್ಗುತ್ತಿದ್ದು, ಜೆಡಿಎಸ್ ಕೂಡ ಆ ವೇಗದಲ್ಲಿ ಸಾಗಬೇಕಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುವುದು ಅಗತ್ಯವಿದೆ ಎಂಬರ್ಥದಲ್ಲಿ ದೇವೇಗೌಡರು ಹೇಳಿದರು.

ಬೆಂಗಳೂರು(ಆ. 28): ಕುಟುಂಬ ರಾಜಕಾರಣದ ಆರೋಪ ಎದುರಿಸುತ್ತಿರುವ ಜೆಡಿಎಸ್ ಪಕ್ಷ ಬದಲಾಗಲು ನಿರ್ಧರಿಸುವಂತಿದೆ. ಇದಕ್ಕೆ ಸಾಕ್ಷಿಯಾಗಿ ನೂತನ ಜೆಡಿಎಸ್ ಪದಾಧಿಕಾರಿಗಳ ಪಟ್ಟಿ ಇದೆ. ಇಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ದೇವೇಗೌಡ ಕುಟುಂಬದ ಪ್ರಮುಖ ಸದಸ್ಯರ ಹೆಸರನ್ನು ಸೇರಿಸಲಾಗಿಲ್ಲ. ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣನವರ ಹೆಸರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಈ ಮೂಲಕ ಕುಟುಂಬ ರಾಜಕಾರಣದ ಕಳಂಕವನ್ನು ದೂರ ಮಾಡಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ದೃಢ ನಿರ್ಧಾರ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಂಕಲ್ಪ ತೊಟ್ಟಿರುವ ಜೆಡಿಎಸ್ ಪಕ್ಷವು ಈಗ ಭಿನ್ನಮತೀಯರ ಬವಣೆಯಿಂದ ಪಾಠ ಕಲಿತಂದಿದ್ದು, ಸಾಮೂಹಿಕ ನಾಯಕತ್ವಕ್ಕಾಗಿ ತಹತಹಿಸುತ್ತಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ದೇವೇಗೌಡರು ಕೂಡ ಸಾಮೂಹಿಕ ನಾಯಕತ್ವದ ಕುರಿತು ಮಾತನಾಡಿದರು. ಎರಡು ರಾಷ್ಟ್ರೀಯ ಪಕ್ಷಗಳು ವೇಗವಾಗಿ ಮುನ್ನುಗ್ಗುತ್ತಿದ್ದು, ಜೆಡಿಎಸ್ ಕೂಡ ಆ ವೇಗದಲ್ಲಿ ಸಾಗಬೇಕಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುವುದು ಅಗತ್ಯವಿದೆ ಎಂಬರ್ಥದಲ್ಲಿ ದೇವೇಗೌಡರು ಹೇಳಿದರು.

ಇನ್ನು, ಎಚ್.ಡಿ.ಕುಮಾರಸ್ವಾಮಿಯವರ ಇಸ್ರೇಲ್ ಪ್ರವಾಸ ಬಗ್ಗೆಯೂ ದೇವೇಗೌಡರು ಮಾತನಾಡಿದರು. "ಮುಖ್ಯಮಂತ್ರಿಯಾದ ಬಳಿಕ ಮಾಡಬೇಕಿದ್ದ ಪ್ರವಾಸವನ್ನು ಈಗಲೇ ಮಾಡುತ್ತಿದ್ದೀಯಲ್ಲ ಎಂದು ನಾನು ಕೇಳಿದೆ. ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ ಹೇಳಿದ," ಎಂದು ಗೌಡರು ತಿಳಿಸಿದರು.

ಇದೇ ವೇಳೆ, ಪಕ್ಷದ ಸಂಘಟನೆಗಾಗಿ ಹಿರಿಯರ ನೇತೃತ್ವದಲ್ಲಿ 7 ತಂಡಗಳನ್ನು ರಚಿಸಲಾಗಿದೆ. ಎರಡು ವಾರಕ್ಕೊಮ್ಮೆ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚೆ ಮಾಡಲಾಗುವುದು. ಸೆ. 22ರಂದು ಬೆಂಗಳೂರಿನಲ್ಲಿ ಜೆಡಿಎಸ್'ನ ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಿಗಳು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವೇಗೌಡರ ಜೊತೆ ಕುಪ್ಪೇಂದ್ರ ರೆಡ್ಡಿ, ಪಿಳ್ಳಮುನಿಸ್ವಾಮಪ್ಪ, ನಾರಾಯಣಸ್ವಾಮಿ, ಹೆಚ್.ಸಿ.ನೀರಾವರಿ, ಜಫ್ರುಲ್ಲಾ ಖಾನ್ ಅವರೂ ಭಾಗವಹಿಸಿದ್ದರು. >