ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಈಗಾಗಲೇ ಸಾಮಾಜಿಕವಾಗಿ ಸಕ್ರಿಯವಾಗಿದ್ದು, ಪಕ್ಷದ ವಿಚಾರವನ್ನು ರಾಜ್ಯದ ಜನರ ಬೆರಳತುದಿಯಲ್ಲಿಡಲು ಮತ್ತೊಂದು ಹೆಜ್ಜೆ ಇಟ್ಟಿದೆ.
ಬೆಂಗಳೂರು(ಡಿ.10): ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಈಗಾಗಲೇ ಸಾಮಾಜಿಕವಾಗಿ ಸಕ್ರಿಯವಾಗಿದ್ದು, ಪಕ್ಷದ ವಿಚಾರವನ್ನು ರಾಜ್ಯದ ಜನರ ಬೆರಳತುದಿಯಲ್ಲಿಡಲು ಮತ್ತೊಂದು ಹೆಜ್ಜೆ ಇಟ್ಟಿದೆ. ‘ನಮ್ಮ ಎಚ್‌ಡಿಕೆ’ ಹೆಸರಲ್ಲಿ ಟ್ವಿಟರ್, ಯೂಟೂಬ್‌ನಂತಹ ಜಾಲತಾಣದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ.
ಇದೀಗ ಜೆಡಿಎಸ್ ನಿಂದ ಮೊಬೈಲ್ ಸೇವೆ ಆರಂಭಿಸುತ್ತಿದ್ದು, ನಿತ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಸುದ್ದಿ ಮೊಬೈಲ್‌ನಲ್ಲಿ ಪಡೆದುಕೊಳ್ಳುವ ಯೋಜನೆಗೆ ಅವರ ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. ಮೊಬೈಲ್ ಸಂಖ್ಯೆ 9483986999 ಗೆ ಮಿಸ್‌ಕಾಲ್ ಕೊಟ್ಟರೆ ಮೊಬೈಲ್ ಮಾಲೀಕರ ಸಂಖ್ಯೆ ನೋಂದಣಿಯಾಗಲಿದೆ. ಎಚ್.ಡಿ. ಕುಮಾರಸ್ವಾಮಿ ಅವರ ಭಾಷಣ, ಸುದ್ದಿಗೋಷ್ಠಿ ಸೇರಿದಂತೆ ಎಲ್ಲಾ ಮಾಹಿತಿಯು ಸಾಮಾನ್ಯ ಜನರ ಮೊಬೈಲ್‌ನಲ್ಲಿ ಲಭ್ಯವಾಗಲಿದೆ.
ಪ್ರತಿದಿನ ಮೂರು ಬಾರಿ ಮೊಬೈಲ್ ಮಾಲೀಕರಿಗೆ ದೊರಕಲಿದೆ. ಸುದ್ದಿಗಳ ಜತೆಗೆ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳ ಆಡಿಯೋ, ವಿಡಿಯೋಗಳನ್ನು ಕಳುಹಿಸಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಕುಮಾರಸ್ವಾಮಿ ಅವರ ಕಾರ್ಯಕ್ರಮದ ವಿವರಗಳನ್ನು ನೀಡುವ ಮೂಲಕ ಆರಂಭವಾಗುವ ಸುದ್ದಿ ಸೇವೆಯು ದಿನದ ಅಂತ್ಯಕ್ಕೆ ರೌಂಡ್ ಆಪ್ ನೀಡುವ ಮೂಲಕ ಮುಕ್ತಾಯವಾಗಲಿದೆ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.
