ರಾಜ್ಯದಲ್ಲಿ ರಥಯಾತ್ರೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿ ರಥಯಾತ್ರೆ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ವಿಶೇಷ ಬಸ್ ಸಿದ್ಧವಾಗಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಬಸ್ ಇದೀಗ ಕುಮಾರಸ್ವಾಮಿ ನಿವಾಸ ತಲುಪಿದೆ.

ಬೆಂಗಳೂರು(ಅ.04): ರಾಜ್ಯದಲ್ಲಿ ರಥಯಾತ್ರೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿ ರಥಯಾತ್ರೆ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ವಿಶೇಷ ಬಸ್ ಸಿದ್ಧವಾಗಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಬಸ್ ಇದೀಗ ಕುಮಾರಸ್ವಾಮಿ ನಿವಾಸ ತಲುಪಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಮಹೂರ್ತ ಫಿಕ್ಸ್ ಆಗಿದ್ದು, ನವೆಂಬರ್​ 7ರಿಂದ ಪ್ರವಾಸಕ್ಕೆ ಹೊರಡಲಿದೆ. ವಿಶೇಷ ಬಸ್‌ಗೆ ಕುಮಾರಸ್ವಾಮಿ ಪೂಜೆ ಸಲ್ಲಿಕೆ ಮಾಡಿದ್ದು, ಬಸ್ ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಕಾಸ ವಾಹಿನಿ ಎನ್ನುವ ಹೆಸರನ್ನು ವಿಶೇಷ ಬಸ್‌'ಗೆ ಇಡಲಾಗಿದೆ. ಅಶೋಕ್ ಲೇಲ್ಯಾಂಡ್ ಕಂಪನಿಯ ಬಸ್‌'ನ ಚಾಸಿಗೆ ಸೇಲಂನ ಸ್ಪೇಸ್ ಟೆಕ್ ಕಂಪನಿ ವಿನ್ಯಾಸಗೊಳಿಸಿದೆ.

1 ಕೋಟಿ ರೂ.ಗಳನ್ನು ಬಸ್ ವಿನ್ಯಾಸಕ್ಕೆ ವ್ಯಯಿಸಲಾಗಿದ್ದು, ಇದಕ್ಕಾಗಿ ಮೂರು ತಿಂಗಳನ್ನು ತೆಗೆದುಕೊಳ್ಳಲಾಗಿದೆ. ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿರುವ ಬಸ್ ಒಳಗಡೆ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಬೆಡ್ ರೂಂ, ಬಾತ್ ರೂಂ, ಅಡುಗೆ ಕೋಣೆಯನ್ನೂ ಹೊಂದಿದೆ. ಮೂರು ಜನರನ್ನು ಬಸ್‌'ನ ಮೇಲ್ಭಾಗಕ್ಕೆ ಎತ್ತುವ ಹೈಡ್ರಾಲಿಕ್ ಲಿಫ್ಟ್ ವೇದಿಕೆ ವ್ಯವಸ್ಥೆ ಬಸ್‌'ನ ಪ್ಲಸ್ ಪಾಯಿಂಟ್ ಆಗಿದೆ. ಸುದ್ದಿ ವಾಹಿನಿಗಳ ವೀಕ್ಷಣೆಗೆ ಡಿಜಿಟಲ್ ಇಂಟರ್‌ ನೆಟ್ ಟಿವಿ, ಹೋಂ ಥಿಯೇಟರ್ ಸೌಲಭ್ಯವನ್ನೂ ಬಸ್ ಒಳಗೊಂಡಿದ್ದು, ಮೂರ್ನಾಲ್ಕು ಜನ ಕುಳಿತು ಸಭೆ ನಡೆಸಲು ಅನುವಾಗುವಂತೆ ಸೋಫಾ ವ್ಯವಸ್ಥೆ, ಕುಮಾರಸ್ವಾಮಿ ಅವರಿಗೆ ಚಲಿಸುವ ವ್ಯವಸ್ಥೆ ಹೊಂದಿರುವ ವಿಶೇಷ ಆಸನವನ್ನು ಬಸ್ ಹೊಂದಿದೆ.