ಬೆಂಗಳೂರು: ಬಹುದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಇಂದು ತೆರೆ ಬಿದ್ದಿದ್ದು, ನಾಲ್ವರು ಜೆಡಿಎಸ್ ಬಂಡಾಯ ಶಾಸಕರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ವಿಧಾನಸಭೆ ಸ್ಪೀಕರ್ ಕೋಳಿವಾಡ ಅವರ ಮನೆಗೆ ಆಗಮಿಸಿದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯಕ್, ಚೆಲುವರಾಯ ಸ್ವಾಮಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

'ಸ್ವ ಇಚ್ಛೆಯಿಂದ, ಯಾವುದೇ ಒತ್ತಡ ಇಲ್ಲದೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ,' ಎಂದು ಈ ರೆಬೆಲ್ ಮುಖಂಡರು ಹೇಳಿದ್ದು, ಇವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.

ಬಾಲಕೃಷ್ಣ ಹಾಗೂ ಇಕ್ಬಾಲ್ ಅನ್ಸಾರಿ ಇನ್ನು ರಾಜೀನಾಮೆ ನೀಡುವುದು ಬಾಕಿ ಇದೆ.  ರಮೇಶ್ ಬಂಡಿಸಿದ್ದೇಗೌಡ ಅವರು ನಿನ್ನೆಯೇ ರಾಜೀನಾಮೆ ಸಲ್ಲಿಸಿಯಾಗಿದೆ.