ಈಗಲೂ ನಾವು ಜೆಡಿಎಸ್​​​​​ನಲ್ಲೇ ಇದ್ದೇವೆ. ಆದರೆ ಜೆಡಿಎಸ್ ಬೇಡ ಅಂದರೆ ನಾವೇನು ಮಾಡೋದು.

ಬೆಂಗಳೂರು(ಡಿ.24): ನಾವೇನು ತಪ್ಪು ಮಾಡಿಲ್ಲ, ನಾವು ಪಕ್ಷದಲ್ಲಿ ಯಾರಿಗೂ ಬೇಡವಾಗಿದ್ದೇವೆ ಹೀಗಾಗಿ ಪಕ್ಷವನ್ನು ತ್ಯಜಿಸುವುದಾಗಿ ಜೆಡಿಎಸ್ ಬಂಡಾಯ ಮುಖಂಡರಾದ ಜಮೀರ್ ಅಹ್ಮದ್ ಖಾನ್ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಲೂ ನಾವು ಜೆಡಿಎಸ್​​​​​ನಲ್ಲೇ ಇದ್ದೇವೆ. ಆದರೆ ಜೆಡಿಎಸ್ ಬೇಡ ಅಂದರೆ ನಾವೇನು ಮಾಡೋದು. ಜನವರಿ 8ರಂದು ಶರದ್ ಪವಾರ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ