ಅಮಾನತುಗೊಂಡಿರುವ ಇವರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ. ಈ

ನವದೆಹಲಿ(ಆ.16): ಜೆಡಿಎಸ್'ನಿಂದ ಅಮಾನತು'ಗೊಂಡಿರುವ 7 ಬಂಡಾಯ ಶಾಸಕರನ್ನು ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮತಿ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಶಾಸಕರನ್ನು ಜೆಡಿಎಸ್'ನಿಂದ ಹೊರಹಾಕಲಾಗಿದೆ. ಅಮಾನತುಗೊಂಡಿರುವ ಇವರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ. ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ಜನವರಿಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಇವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಲಿಷ್ಠರಾಗಿರುವುದರಿಂದ ಇವರ ಆಗಮನ ಕಾಂಗ್ರೆಸ್'ಗೆ ಲಾಭವಾಗಲಿದೆ. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ್ದಾರೆ. ನೀವು ಕೋಮುವಾದಿ ಪಕ್ಷದಲ್ಲಿದ್ದವರು ನಿಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ಆಮೇಲೆ ನೋಡೋಣ ಎಂದಿದ್ದೇನೆ' ಎಂದು ತಿಳಿಸಿದರು.