ಕಾಂಗ್ರೆಸ್ ಸಭೆಗೆ ಬಂದ JDS ರೆಬೆಲ್ ಶಾಸಕರು..!

First Published 23, Mar 2018, 1:26 PM IST
JDS Rebel MLAs Join Congress Legislative Meeting
Highlights

ಕೆಲಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಜೆ.ಸಿ ಚಂದ್ರಶೇಖರ್ ಪರವಾಗಿ ಜೆಡಿಎಸ್'ನ 7 ಬಂಡಾಯ ಶಾಸಕರು ಮತ ಚಲಾಯಿಸಲಿದ್ದಾರೆ ಎಂದು ಸುವರ್ಣನ್ಯೂಸ್'ಗೆ ಓರ್ವ ಬಂಡಾಯ ಶಾಸಕ ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಮಾ.23): ಅಡ್ಡಮತದಾನ ಮಾಡಿ ಜೆಡಿಎಸ್'ನಿಂದ ಅಮಾನತ್ತಾಗಿದ್ದ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲಹೊತ್ತಿನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಜೆ.ಸಿ ಚಂದ್ರಶೇಖರ್ ಪರವಾಗಿ ಜೆಡಿಎಸ್'ನ 7 ಬಂಡಾಯ ಶಾಸಕರು ಮತ ಚಲಾಯಿಸಲಿದ್ದಾರೆ ಎಂದು ಸುವರ್ಣನ್ಯೂಸ್'ಗೆ ಓರ್ವ ಬಂಡಾಯ ಶಾಸಕ ಮಾಹಿತಿ ನೀಡಿದ್ದಾರೆ.

ಇದೇವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಹಾಗೆಯೇ ಜೆಡಿಎಸ್ ಬಂಡಾಯ ಶಾಸಕರು ಭಾನುವಾರ ಮೈಸೂರಿನಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.  

loader