ಬೆಂಗಳೂರು[ಮೇ. 21] ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ನಂತರ ಜೆಡಿಎಸ್ ಸಭೆ ನಡೆಸಲು ಸಿದ್ಧವಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಎಕ್ಸಿಟ್ ಪೋಲ್ ವ್ಯತಿರಿಕ್ತ ಫಲಿತಾಂಶ ಬಂದ ಕಾರಣಕ್ಕೆ ಸಭೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಸಭೆ ಬಗ್ಗೆ ಆಸಕ್ತಿ ವಹಿಸದ  ಎಚ್.ಡಿ.ದೇವೇಗೌಡ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಸಭೆ ನಡೆಯುವ ಸಾಧ್ಯತೆ ಕ್ಷೀಣವಾಗಿದೆ.

ಸಮೀಕ್ಷೆಗಳಿಂದ ನಿರಾಸೆ: ಕಿಂಗ್‌ ಮೇಕರ್‌ಗಳ ರಣತಂತ್ರ ಬದಲು!

 23 ರ ನಂತರ ಫಲಿತಾಂಶ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಮಹಾಘಟಬಂಧನ್ ಗೆ ಪೂರಕವಾದ ಫಲಿತಾಂಶ ಬಂದ್ರೆ ತಕ್ಷಣವೇ ಸಭೆಗೆ ಸಮಯ ನಿಗದಿ ಮಾಡಲಾಗುತ್ತದೆ. ಅಲ್ಲಿವರೆಗೆ ತಟಸ್ಥವಾಗಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.