ಈ ಬಾರಿ ನಾವು ಕಷ್ಟಪಡದೇ ಇದ್ದರೂ ಅರವತ್ತರಿಂದ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆದರೆ ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ತಲುಪುವುದು ನಮ್ಮ ಗುರಿ

ಬೆಂಗಳೂರು(ಡಿ.06): ಜೆಡಿಎಸ್ ಮುಂದಿನ ಚುನಾವಣೆ ಗೆಲ್ಲಲು ವಿಭಿನ್ನ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಕಾರ್ಯ ಯೋಜನೆಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣವಾದ ಅಂಶಗಳ ಪಟ್ಟಿ ಮಾಡಿಕೊಂಡಿದ್ದೇವೆ. 105 ಕ್ಷೇತ್ರದಲ್ಲಿ 70 ರಿಂದ 80 ಸ್ಥಾನ ಗೆಲ್ಲಲೇಬೇಕು.ಇಪ್ಪತ್ತರಿಂದ ಮೂವತ್ತು ಕ್ಷೇತ್ರ ಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ಇದೆ. ಅಂತಹಾ ಕಡೆ ಆಕಾಂಕ್ಷಿಗಳ ನಡುವೆ ಸೌಹಾರ್ದತೆ ಮೂಡಿಸಬೇಕು. ಕಳೆದ ಬಾರಿ ಆದ ತಪ್ಪುಗಳು ಮರುಕಳಿಸಬಾರದು. ಹಾಗಾಗಿ ಎ, ಬಿ,ಸಿ ಕ್ಯಾಟಗರಿ ಅಂತಾ ಮಾಡಿಕೊಂಡಿದ್ದೇವೆ. ಈ ಬಾರಿ ನಾವು ಕಷ್ಟಪಡದೇ ಇದ್ದರೂ ಅರವತ್ತರಿಂದ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆದರೆ ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ತಲುಪುವುದು ನಮ್ಮ ಗುರಿ. 114 ಸ್ಥಾನ ಗೆದ್ದರಷ್ಟೇ ರಾಜ್ಯಪಾಲರು ನಮಗೆ ಅವಕಾಶ ನೀಡುತ್ತಾರೆ. ಬೇರೆ ಪಕ್ಷದ ಬಾಗಿಲು ತಟ್ಟಲು ನಮಗೆ ಇಷ್ಟ ಇಲ್ಲ. ಸಮ್ಮಿಶ್ರ ಸರ್ಕಾರ ಬಂದರೆ ನಮ್ಮ ಪಕ್ಷದ ಪ್ರಣಾಳಿಕೆ ಯಲ್ಲಿನ ಕಾರ್ಯಕ್ರಮ ಗಳನ್ನು ಜಾರಿ ತರೋದು ಕಷ್ಟ' ಎಂದು ತಿಳಿಸಿದರು.