ಬೆಂಗಳೂರು, [ಆ.29]: ಪೋನ್ ಟ್ಯಾಪಿಂಗ್ ಹಗರಣ ಜೆಡಿಎಸ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೈತ್ರಿ ಸರ್ಕಾರವಿದ್ದಾಗ ಕೇವಲ ಬಿಜೆಪಿ, ಕಾಂಗ್ರೆಸ್ ಮತ್ರವಲ್ಲದೇ ಕುಮಾರಸ್ವಾಮಿ ತಮ್ಮ ಆಪ್ತ ನಾಯಕರಾದ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನು ಕೆಲ ನಾಯಕರ ಫೋನ್ ಗಳನ್ನು ಸಹ ಟ್ಯಾಪಿಂಗ್ ಮಾಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದರಿಂದ ಕುಮಾರಸ್ವಾಮಿ ಮೇಲೆ ಆಪ್ತರು ಮುನಿಸಿಕೊಂಡಿದ್ದು, ಜೆಡಿಎಸ್ ನಲ್ಲೂ  ಭಿನ್ನಮತ ಭುಗಿಲೇಳುತ್ತಿದೆ. ಸಾಲದಕ್ಕೆ ಬಿಜೆಪಿ ಮನೆಗೆ ಹತ್ತಿರವಾಗುತ್ತಿದ್ದಾರೆ. ನಮ್ಮ ಫೋನ್ ಟ್ಯಾಪ್ ಮಾಡುವಂತದ್ದೇನಿತ್ತು..? ಯಾಕೆ ನಮ್ಮ ಮೇಲೆ ಅನುಮಾನ.?  ನಾವು ಇಷ್ಟು ನಿಷ್ಠೆ ತೋರಿದ್ರೂ ಇವರಿಗ್ಯಾಕೆ ಡೌಟ್.? ಎಂದು ಪುಟ್ಟರಾಜು ತಮ್ಮ ಬೆಂಬಲಿಗರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರುವ ಸೂಚನೆ ಕೊಟ್ಟ ಅನರ್ಹ JDS ಶಾಸಕ

ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡ ಆಪ್ತರು
ಮೈತ್ರಿ ಸರ್ಕಾರ ಪತನಗೊಂಡಿದ್ದೇ ತಡ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದರು.

 ಇದೀಗ ಪುಟ್ಟರಾಜು ಸಹ ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಕ್ಕೆ ಪೂರಕವೆಂಬಂತೆ  ಎಚ್ ಡಿಕೆ ಜತೆ ವಿದೇಶ ಪ್ರವೇಶಕ್ಕೆ ತೆರಳಲು ನಿರಾಕರಿಸಿ, ಸಿಎಂ ಯಡಿಯೂರಪ್ಪ ಅವರ ಕಾರ್ಯಕ್ರದಲ್ಲಿ ಭಾಗಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.   
 
ಗುರುವಾರ ಸಿಎಂ ಯಡಿಯೂರಪ್ಪ  ಮಂಡ್ಯಕ್ಕೆ ತೆರಳಿ KRS ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಈ ವೇಳೆ, ಸುಮಲತಾ ಸೇರಿದಂತೆ  ಮಂಡ್ಯದ ಜೆಡಿಎಸ್ ನಾಯಕರನ್ನು ಸಹ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಹಾಗೆಯೇ  ಜೆಡಿಎಸ್ ಶಾಸಕ ಪುಟ್ಟರಾಜು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಇನ್ನು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಜೆಡಿಎಸ್ ಶಾಸಕ  ಜಿ.ಟಿ. ದೇವೇಗೌಡ ಹಾರ ಹಾಕು ಮೂಲಕ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅವರು ಯಡಿಯೂರಪ್ಪ ಸಿಎಂ ಆದ್ಮೇಲೆ ಮಳೆ ಚೆನ್ನಾಗಿ ಆಗಿದೆ, ಬರ ಎಲ್ಲ ಹೋಗಿ ನದಿ ಕೆರೆ ಕಟ್ಟೆಗಳೆಲ್ಲಾ ತುಂಬಿವೆ ಎಂದು ಬಿಎಸ್ ವೈ ಅವರನ್ನು ಗುಣಗಾನ ಮಾಡಿದರು.

ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡಿರುವ ಬಿಜೆಪಿ, ಮಂಡ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಸ್ಮೂತ್ ಆಗಿಯೇ ಜೆಡಿಎಸ್ ನಾಯಕರನ್ನು ಹತ್ತಿರು ಕರೆದುಕೊಳ್ಳಿತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಂದಿನ ಕಾರ್ಯಕ್ರಮಕ್ಕೆ ಖುದ್ದು ಸಿಎಂ ಅವರೇ ಪುಟ್ಟರಾಜು ಸೇರಿದಂತೆ ಜೆಡಿಎಸ್ ನಾಯಕರಿಗೆ ಆಹ್ವಾನ ನೀಡಿರುವುದು ರಾಜ್ಯ ರಾಜಕಾರದಲ್ಲಿ ಸಂಚಲನ ಮೂಡಿಸಿದೆ.