ಮಂಡ್ಯ (ಆ.29): KRS ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗೀನ ಅರ್ಪಣೆಗೆ ಆಗಮಿಸಿದ್ದು, ಈ ವೇಳೆ  ಅನರ್ಹ ಶಾಸಕರೋರ್ವರು ಸಿಎಂ ಭೇಟಿಗೆ ಆಗಮಿಸಿದ್ದಾರೆ. 

ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ   KRSಗೆ ಬಂದು ಸಿಎಂ ಯಡಿಯೂರಪ್ಪ ಅವರ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹ ಶಾಸಕ ನಾರಾಯಣ ಗೌಡ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಕೂಡ ಆಗಮಿಸಿದ್ದು, ಈ ಮೂಲಕ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ. 

ಮಂಡ್ಯದ ತಮ್ಮ ಕ್ಷೇತ್ರವಾದ ಕೆ.ಆರ್.ಪೇಟೆಯ ಬಿಜೆಪಿ ಮುಖಂಡರ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.