ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು: ಜೆಡಿಎಸ್‌ ಶಾಸಕನ ಬಯಕೆ

First Published 24, Feb 2018, 7:25 AM IST
JDS MLA Says Again Siddaramaiah Will Become CM
Highlights

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನೀವೇ ಗೆದ್ದು ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಆಸೆ’... ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಜೆಡಿಎಸ್‌ ಸದಸ್ಯ, ಮಾಜಿ ಉಪಸಭಾಪತಿ ಪುಟ್ಟಣ್ಣ ನೀಡಿದ ಹೇಳಿಕೆ ಆಶ್ಚರ್ಯವನ್ನುಂಟು ಮಾಡಿತು.

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನೀವೇ ಗೆದ್ದು ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಆಸೆ’...

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಜೆಡಿಎಸ್‌ ಸದಸ್ಯ, ಮಾಜಿ ಉಪಸಭಾಪತಿ ಪುಟ್ಟಣ್ಣ ನೀಡಿದ ಹೇಳಿಕೆ ಆಶ್ಚರ್ಯವನ್ನುಂಟು ಮಾಡಿತು. ಅಲ್ಲದೆ, ಅವರು ಶೀಘ್ರ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಕೇಳಿಬರುತ್ತಿರುವ ಮಾತಿಗೆ ಇಂಬು ನೀಡುವಂತಿತ್ತು.

ಮುಖ್ಯಮಂತ್ರಿ ಅವರ ಬಜೆಟ್‌ ಮೇಲಿನ ಭಾಷಣದ ಬಳಿಕ ಮಾತನಾಡಿದ ಅವರು, ನೀವು ಮತ್ತೆ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆ. ಕಳೆದ ಐದು ವರ್ಷದ ಆಡಳಿತದಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಿ. ಆದರೆ, ಮುಂದಿನ 3 ತಿಂಗಳು ಬಹಳ ಮುಖ್ಯ.

ಐಎಎಸ್‌ ಅಧಿಕಾರಿ ಡಿ.ಕೆ. ರವಿ, ಪೊಲೀಸ್‌ ಅಧಿಕಾರಿ ಗಣಪತಿ ಕೇಸ್‌ಗಳನ್ನು ಸಮರ್ಥವಾಗಿ ನಿಭಾಯಿಸಿದಿರಿ. ಈಗ ಕೆಲ ಶಾಸಕ, ಅವರ ಮಕ್ಕಳ ವಿಚಾರಗಳಲ್ಲಿ ಸರ್ಕಾರದ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ.

ಇದು ಸರ್ಕಾರಕ್ಕೆ ಒಳ್ಳೆಯದಲ್ಲ. ಅನಿರೀಕ್ಷಿತವಾಗಿ ಇಂತಹ ಪ್ರಕರಣಗಳು ಎದುರಾಗಬಹುದು. ಸಮರ್ಥವಾಗಿ ನಿಭಾಯಿಸಿ ಎಂದು ಸಲಹೆ ನೀಡಿ​ದ​ರು.

loader