ಜೆಡಿಎಸ್ ಶಾಸಕಗೆ ಕಾಂಗ್ರೆಸ್ ಟಿಕೆಟ್ ?

First Published 4, Mar 2018, 10:18 AM IST
JDS MLA Now Congress Candidate
Highlights

ಹಾಲಿ ಶಾಸಕರ ವಲಸೆಯಿಂದಾಗಿ ಜೆಡಿಎಸ್‌ನ ಬಲ ಏಕಾಏಕಿ ಕುಸಿದಂತಾಗಿದೆ. ಪರ್ಯಾಯ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದೆ.

ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಪ್ರಸನ್ನಕುಮಾರ್ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಬರಲು ಸಜ್ಜಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ. ಕಾಂಗ್ರೆಸ್ ನಾಯಕತ್ವ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದೆ. ಆದರೆ, ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ ಪುತ್ರರಾದ ಪ್ರಸನ್ನ ಕುಮಾರ್ ಹೈಕಮಾಂಡ್‌ನಲ್ಲಿ ಪ್ರಬಲ ಸಂಪರ್ಕಗಳನ್ನು ಹೊಂದಿದ್ದಾರೆ.

ಈ ಪೈಪೋಟಿಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಟಿಕೆಟ್ ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೂ ಪ್ರಸನ್ನಕುಮಾರ್ ಸಾಮರ್ಥ್ಯ ಕಡೆಗಣಿಸುವಂತಿಲ್ಲ. ಹಾಲಿ ಶಾಸಕರ ವಲಸೆಯಿಂದಾಗಿ ಜೆಡಿಎಸ್‌ನ ಬಲ ಏಕಾಏಕಿ ಕುಸಿದಂತಾಗಿದೆ. ಪರ್ಯಾಯ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದೆ. ಇನ್ನು ಬಿಜೆಪಿ ಸಂಘಟನೆ ಇಲ್ಲಿ ಹೇಳಿಕೊಳ್ಳುವಂತಿಲ್ಲ. ಕಳೆದ ಬಾರಿ ಸೋಲುಂಡಿರುವ ಪಳನಿವೇಲು ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

loader