ವರ್ಷದ ಹಿಂದೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪರೇಷನ್ ಆದ ಮೇಲೆ ವಿಶ್ರಾಂತಿ ಪಡೆಯದೇ ಹೆಚ್ಚು ಓಡಾಟ ನಡೆಸಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು.

ಮೈಸೂರು(ಅ.30):ಅನಾರೋಗ್ಯದ ಕಾರಣದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಸ್ಥಿತಿ ಗಂಭೀರವಾಗಿದೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಇವರನ್ನು ಕೆಲ ದಿನಗಳ ಹಿಂದಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಐ'ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವರ್ಷದ ಹಿಂದೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಒಳಗಾಗಿದ್ದರು. ಅಪರೇಷನ್ ಆದ ಮೇಲೆ ವಿಶ್ರಾಂತಿ ಪಡೆಯದೇ ಹೆಚ್ಚು ಓಡಾಟ ನಡೆಸಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು.

ಇದಾದ ಕೆಲವು ತಿಂಗಳ ಬಳಿಕ ಅಮೇರಿಕಾದಲ್ಲೂ ಚಿಕಿತ್ಸೆ ಪಡೆದಿದ್ದರು.ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಕಾರಣದಿಂದ ಮೈಸೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು.ಎಚ್.ಡಿ. ಕೋಟೆವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವಚಿಕ್ಕಮಾದು ಅವರು ಮೈಸೂರು-ಚಾಮರಾಜನಗರಜಿಲ್ಲೆಗಳಲ್ಲಿನಾಯಕಸಮುದಾಯದಪ್ರಭಾವಿಮುಖಂಡರಾಗಿದ್ದಾರೆ.