ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.  ನೈತಿಕತೆ ಇದ್ದರೆ  ಜೆಡಿಎಸ್'ಗೆ ರಾಜೀನಾಮೆ ನೀಡಲಿ. ಆಮೇಲೆ ನಮ್ಮ ಮೇಲೆ ಬಾಣಬಿರುಸು ಬಿಡಲಿ. ಅವರು  ಜೆಡಿಎಸ್ ಅನ್ನ ತಿನ್ನುತ್ತಿದ್ದಾರೆ.  ಜೆಡಿಎಸ್ ವಿರುದ್ಧ ಓಟು ಹಾಕಿದಾಗಲೇ ರಾಜೀನಾಮೆ ನೀಡಬೇಕಿತ್ತು ಎಂದು ರೇವಣ್ಣ ಹೇಳಿದ್ದಾರೆ.

ಬೆಂಗಳೂರು (ಅ.09): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ನೈತಿಕತೆ ಇದ್ದರೆ ಜೆಡಿಎಸ್'ಗೆ ರಾಜೀನಾಮೆ ನೀಡಲಿ. ಆಮೇಲೆ ನಮ್ಮ ಮೇಲೆ ಬಾಣಬಿರುಸು ಬಿಡಲಿ. ಅವರು ಜೆಡಿಎಸ್ ಅನ್ನ ತಿನ್ನುತ್ತಿದ್ದಾರೆ. ಜೆಡಿಎಸ್ ವಿರುದ್ಧ ಓಟು ಹಾಕಿದಾಗಲೇ ರಾಜೀನಾಮೆ ನೀಡಬೇಕಿತ್ತು ಎಂದು ರೇವಣ್ಣ ಹೇಳಿದ್ದಾರೆ.

ನನ್ನ ವಿರುದ್ಧ ಮೀಟರ್ ತೋರಿಸೋದು ಬೇಡ. ಕಾಂಗ್ರೆಸ್ ಮೀಟರು ಕಮ್ಮಿಯಾಗಿದೆ ಅಲ್ಲಿ ತೋರಿಸಲಿ. ಕುಮಾರಸ್ವಾಮಿಗೆ ಟೋಪಿ ಹಾಕಿದವರು ಅವರು. ಜಮೀರ್'ಗೆ ತಾಕತ್ತಿದ್ದರೆ ಹುಟ್ಟೂರು ಕುಣಿಗಲ್ ನಲ್ಲಿ ಬಂದು ಸ್ಪರ್ಧಿಸಲಿ. ನಾನು ನನ್ನ ಹುಟ್ಟೂರಲ್ಲಿ ಸ್ಪರ್ಧೆ ಮಾಡ್ತಿನಿ. ಮಂತ್ರಿ ಮಾಡಿದ ಕುಮಾರಸ್ವಾಮಿಗೆ ಮೋಸ ಮಾಡಿದರು. ಜಿ.ಪರಮೇಶ್ವರ್ ಇಂತವರನ್ನ ಕಾಂಗ್ರೆಸ್'ಗೆ ಸೇರಿಸಿಕೊಳ್ಳೊಕೆ ಮೊದಲು ಯೋಚಿಸಬೇಕಿತ್ತು. ಮುಸಲ್ಮಾನ್ ಬಗ್ಗೆ ಅಭಿಮಾನ ಇದ್ದವರು ಬಿಜೆಪಿ ಸರ್ಕಾರದಲ್ಲಿ ಯಾಕೆ ಮಂತ್ರಿ ಆದ್ರು? ಸೋನಿಯಾ ಗಾಂಧಿ ,ರಾಹುಲ್ ಗಾಂಧಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ನನಗೆ ವ್ಯಥೆಯಾಗ್ತಾ ಇದೆ. ನಾನು ದೇವೇಗೌಡರು ಹೇಳಿದಹಾಗೆ ಕೇಳಿಕೊಂಡಿರುತ್ತೇನೆ ಎಂದು ಹಾಸನದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.