Asianet Suvarna News Asianet Suvarna News

70 ಸಾವಿರ ಕೋಟಿ ಮೊತ್ತವನ್ನು ನಿಭಾಯಿಸುವ ಹೊಣೆ ಜೆಡಿಎಸ್‌

ಜೆಡಿಎಸ್ ಪಡೆದಿರುವ 12 ಖಾತೆಗಳಿಗೆ ಮುಂಬರುವಬಜೆಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ  ಅನುದಾನ ಸಿಗಲಿದೆ. ವಿಶೇಷವಾಗಿ ಇಂಧನ, ಲೋಕೋಪಯೋಗಿ,  ಶಿಕ್ಷಣ ಇಲಾಖೆಗೆ ಸಹಜವಾಗಿ ದೊಡ್ಡ ಪ್ರಮಾಣದ ಅನುದಾನ ಲಭ್ಯವಾಗಲಿದೆ. ಸಾಮಾನ್ಯವಾಗಿ ಯಾವುದೇ ಬಜೆಟ್‌ನಲ್ಲಿ ಶಿಕ್ಷಣ, ನೀರಾವರಿ, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಹಣ ನೀಡಲಾಗುತ್ತಿದೆ.

JDS Maintain 12 portfolios

ಬೆಂಗಳೂರು (ಜೂ. 03): ಜೆಡಿಎಸ್ ಪಡೆದಿರುವ 12 ಖಾತೆಗಳಿಗೆ ಮುಂಬರುವಬಜೆಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ  ಅನುದಾನ ಸಿಗಲಿದೆ. ವಿಶೇಷವಾಗಿ ಇಂಧನ, ಲೋಕೋಪಯೋಗಿ, ಶಿಕ್ಷಣ ಇಲಾಖೆಗೆ ಸಹಜವಾಗಿ ದೊಡ್ಡ ಪ್ರಮಾಣದ ಅನುದಾನ ಲಭ್ಯವಾಗಲಿದೆ.

ಸಾಮಾನ್ಯವಾಗಿ ಯಾವುದೇ ಬಜೆಟ್‌ನಲ್ಲಿ ಶಿಕ್ಷಣ, ನೀರಾವರಿ, ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ಹಾಗಾಗಿ ಕಡಿಮೆ ಖಾತೆ ಹೊಂದಿದ್ದರೂ ಜೆಡಿಎಸ್ ‘ಬಲಿಷ್ಠ’ ಖಾತೆಗಳನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿಯಲ್ಲಿ 2.09 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದರು. ಈಗ ಸಮ್ಮಿಶ್ರ ಸರ್ಕಾರದ ಬಜೆಟ್ ಸಹ ಹೆಚ್ಚು ಕಡಿಮೆ ಇದೇ ಗಾತ್ರದಲ್ಲಿರುತ್ತದೆ. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಪ್ರಮುಖವಾಗಿ ಶಿಕ್ಷಣ ಇಲಾಖೆಗೆ 26,864 ಕೋಟಿ, ಇಂಧನ ಇಲಾಖೆಗೆ 14,136 ಕೋಟಿ ರು. ಹಾಗೂ ಲೋಕೋಪಯೋಗಿ ಇಲಾಖೆಗೆ 9,271 ಕೋಟಿ ರು. ಹಾಗೂ ಸಾರಿಗೆಗೆ 2208 ಕೋಟಿ ರು. ನಿಗದಿ ಮಾಡಲಾಗಿತ್ತು. ಉಳಿದಂತೆ ಜೆಡಿಎಸ್ ಪಡೆದಿರುವ ಮೀನುಗಾರಿಕೆ, ರೇಷ್ಮೆ, ಪ್ರವಾಸೋದ್ಯಮ, ವಾರ್ತಾ ಇಲಾಖೆ, ಪಶು ಸಂಗೋಪನ, ಸಹಕಾರ ಮುಂತಾದ ಇಲಾಖೆಗಳಿಂದ ಒಟ್ಟಾರೆ ಸುಮಾರು 70 ಸಾವಿರ ಕೋಟಿ ಮೊತ್ತವನ್ನು ನಿಭಾಯಿಸುವ ಹೊಣೆ ಜೆಡಿಎಸ್‌ಗೆ ಲಭ್ಯವಾಗಲಿದೆ. 

Follow Us:
Download App:
  • android
  • ios