ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ನಾನು ಮತ್ತು ಜಿಟಿಡಿ ಒಂದೇ ಪಕ್ಷದಲ್ಲಿದ್ದವರು. ಕಳೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜಿಟಿಡಿ ನನ್ನ ಪರ ಕೆಲಸ ಮಾಡಿರುವ ಸಾಧ್ಯತೆ ಇದೆ. ಅವರಿಗೆ ನನ್ನ ಮೇಲೆ ಅಪಾರ ಅಭಿಮಾನ ಮತ್ತು ಪ್ರೀತಿ ಎರಡೂ ಇದೆ. ಇವರಂತೆ ಜೆಡಿಎಸ್‌ನ ಹಲವು ಮುಖಂಡರಿಗೂ ಪ್ರೀತಿ, ಅಭಿಮಾನ ಇದೆ ಎಂದು ಹೇಳಿದರು.

ಮೈಸೂರು (ಆ.30): ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ನಾನು ಮತ್ತು ಜಿಟಿಡಿ ಒಂದೇ ಪಕ್ಷದಲ್ಲಿದ್ದವರು. ಕಳೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜಿಟಿಡಿ ನನ್ನ ಪರ ಕೆಲಸ ಮಾಡಿರುವ ಸಾಧ್ಯತೆ ಇದೆ. ಅವರಿಗೆ ನನ್ನ ಮೇಲೆ ಅಪಾರ ಅಭಿಮಾನ ಮತ್ತು ಪ್ರೀತಿ ಎರಡೂ ಇದೆ. ಇವರಂತೆ ಜೆಡಿಎಸ್‌ನ ಹಲವು ಮುಖಂಡರಿಗೂ ಪ್ರೀತಿ, ಅಭಿಮಾನ ಇದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಮತ್ತು ಜಿ.ಟಿ. ದೇವೇಗೌಡರೇ ಪರಸ್ಪರ ಎದುರಾಳಿಯಾಗಬಹುದು. ಏಕೆಂದರೆ ರಾಜಕೀಯದಲ್ಲಿ ಯಾರೂ ಶತ್ರುಗಳು, ಮಿತ್ರರೂ ಅಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ಪ ಶಾಸಕ ಜಿ.ಟಿ.ದೇವೇಗೌಡರು ತಾವು ಮಾತನಾಡುವ ಸರದಿ ಬಂದಾಗ ‘ನಾನೆಂದೂ ಸಿ.ಎಂ. ಸಿದ್ದರಾಮಯ್ಯ ಬಳಿಗೆ ಹೋಗಿಲ್ಲ. ನಾನು ಅವರ ಬಳಿಗೆ ಹೋಗಿದ್ದೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ನಾನು ಮುಂದಿನ ಚುನಾವಣೆಯಲ್ಲೂ ಜೆಡಿಎಸ್‌ನಿಂದಲೇ ಕಣಕ್ಕಿಳಿಯುತ್ತೇನೆ’ ಎಂದು ಘೋಷಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಬಹಳ ಹಿಂದಿನಿಂದಲೂ ಹಿಂದುಳಿದ ವರ್ಗದ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.