ಬೆಂಗಳೂರು, (ಜೂನ್ 05): ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದು. ಹೊಸ ರಾಜ್ಯಾಧ್ಯಕ್ಷ ಯಾರಾಗ್ತಾರೆ ಎನ್ನುವ ಚರ್ಚೆ ಜೋರಾಗಿದೆ.

ಒಂದು ಕಡೆ ವಿಶ್ವನಾಥ್ ಅವರೇ ಮುಂದುವರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ರೆ, ಮತ್ತೊಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟವನ್ನು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಕಟ್ಟುತ್ತಾರೆ ಎನ್ನುವ ಸುದ್ದಿ ಹಬ್ಬಿದೆ.

ವಿಶ್ವನಾಥ್ ರಿಸೈನ್: ಜೆಡಿಎಸ್‌ನ ಮುಂದಿನ ರಾಜ್ಯಾಧ್ಯಕ್ಷ ಯಾರು..?

ಈ ಒಂದು ಸುದ್ದಿಗೆ ಸ್ವತಃ ದತ್ತಾ ಅವರೇ ಪ್ರತಿಕ್ರಿಯಿಸಿದ್ದು, ವಿಶ್ವನಾಥ್ ನಮ್ಮಂತ ಸಾವಿರಾರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಬೇಕು. ಹಾಗಾಗಿ ಅವರೇ‌ ಮುಂದುವರಿತಾರೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಸ್ಪಷ್ಟಪಡಿಸಿದರು.

ಈಗ ಇಡೀ ರಾಜ್ಯಾದ್ಯಂತ ಓಡಾಡಿ‌ ಪಕ್ಷ ಕಟ್ಟಬೇಕಾಗಿದೆ. ಹಾಗಾಗಿ ವಿಶ್ವನಾಥ್ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕು. ದೇವೇಗೌಡರು ವಿಶ್ವನಾಥ್ ಮನವೋಲಿಸುತ್ತಾರೆ ಎಂದು ಹೇಳಿದರು.