’ನನಗೆ ಯಾರೋ ಭಯ ಹುಟ್ಟಿಸೋಕಾಗಲ್ಲ; ನನ್ನದು ಸ್ವಾತಿ ನಕ್ಷತ್ರ; ಮಾಟ ಮಂತ್ರ ಮಾಡಿದ್ರೆ ಅವರಿಗೇ ತಿರುಗು ಬಾಣವಾಗುತ್ತೆ’

First Published 26, Mar 2018, 3:57 PM IST
JDS Leader Slams Rahul Gandhi
Highlights

ಕಾಂಗ್ರೆಸ್ ಸ್ಥಿತಿ ಬೀದಿಗೆ ಬಂದಿದೆ.  ರಾಹುಲ್ ಗಾಂಧಿಗೆ ಪಕೋಡ ತಿನ್ನೋ‌ ಪರಿಸ್ಥಿತಿ ಬಂದಿದೆ.  ಮುಂದಿನ ದಿನಗಳಲ್ಲಿ ಗಲ್ಲಿಗೆ ಹೋಗೋ ಸ್ಥಿತಿ ಬರಲಿದೆ. ರಾಹುಲ್ ಗಾಂಧಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರು (ಮಾ.26): ಕಾಂಗ್ರೆಸ್ ಸ್ಥಿತಿ ಬೀದಿಗೆ ಬಂದಿದೆ.  ರಾಹುಲ್ ಗಾಂಧಿಗೆ ಪಕೋಡ ತಿನ್ನೋ‌ ಪರಿಸ್ಥಿತಿ ಬಂದಿದೆ.  ಮುಂದಿನ ದಿನಗಳಲ್ಲಿ ಗಲ್ಲಿಗೆ ಹೋಗೋ ಸ್ಥಿತಿ ಬರಲಿದೆ. ರಾಹುಲ್ ಗಾಂಧಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ. 

ರಾಹುಲ್ ಗಾಂಧಿಯಿಂದ ದೇವೇಗೌಡರು ಕಲಿಯಬೇಕಿಲ್ಲ.  ರಾಜಕೀಯದಲ್ಲಿ ಇಂಥವರನ್ನು ದೇವೇಗೌಡರು ಸಾಕಷ್ಟು ಮಂದಿ ನೋಡಿದ್ದಾರೆ.  ಜೆಡಿಎಸ್ ಟೀಕಿಸುತ್ತಿರುವ ಕಾಂಗ್ರೆಸ್’ಗೆ  ನಾಚಿಗೆಯಾಗಬೇಕು. ರಾಹುಲ್ ಗಾಂಧಿಗೆ  ತಾಕತ್ತಿದ್ದರೆ ನಮ್ಮ ಪಕ್ಷ ದಿಂದ ಹೈಜಾಕ್ ಮಾಡಿದ್ದೇಕೆ ಹೇಳಲಿ? ನಮಗೆ ಸಂಘ ಪರಿವಾರ ಅಂದ್ರೇನು  ಗೊತ್ತಿಲ್ಲ. ಎಲ್ಲಾ ತಿಳಿದಿರುವುದು 2 ರಾಷ್ಟ್ರೀಯ ಪಕ್ಷ ಗಳಿಗೆ ಮಾತ್ರ.  ನಮ್ಮಲ್ಲಿ ಎ, ಬಿ ಟೀಂ ಇಲ್ಲ.  ಕಾಂಗ್ರೆಸ್'ನಲ್ಲಿರುವುದು ಯಾವ ಟೀಂ ಅಂತ ರಾಹುಲ್ ಗಾಂಧಿ ಹೇಳಲಿ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ. 

ಸಿದ್ದರಾಮಯ್ಯ, ಇಬ್ರಾಹಿಂ, ಮಹದೇವಪ್ಪ, ರೋಷನ್ ಬೇಗ್, ದೇಶಪಾಂಡೆ ಎಲ್ಲಿದ್ದರು? ಮೂಲ ಕಾಂಗ್ರೆಸ್ಸಿಗ ಜಾಫರ್ ಷರೀಫ್ ಮೂಲೆ ಸೇರಿದ್ದಾರೆ.  ನಮ್ಮ ಮಕ್ಕಳ ಸುದ್ದಿ ಜಮೀರ್ ಅಹಮದ್’ಗೆ ಏಕೆ ಬೇಕು? ನಾವು ಅಣ್ಣ-ತಮ್ಮಂದಿರು ಹೊಡೆದಾಡುತ್ತೇವೆ ಎಂದುಕೊಂಡಿದ್ದರೆ ಅವನ ಭ್ರಮೆ ಎಂದು ಏಕವಚನದಲ್ಲಿ ಜಮೀರ್ ಅಹ್ಮದ್’ರನ್ನು  ರೇವಣ್ಣ  ತರಾಟೆಗೆ ತೆಗೆದುಕೊಂಡಿದ್ದಾರೆ. 

ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಜೊತೆ ಸಿಎಂ ಮಾತಿನ ಬಗ್ಗೆ ಪ್ರಸ್ತಾಪಿಸುತ್ತಾ,   ಫೋನ್ ಸಂಪರ್ಕ ಮಾಡಿ ಕೊಟ್ಟಿದ್ದು ಚಲುವರಾಯ ಸ್ವಾಮಿ.  ನನಗೆ ಯಾರೋ ಭಯ ಹುಟ್ಟಿಸೋಕೆ ಆಗಲ್ಲ. ನನ್ನದು ಸ್ವಾತಿ ನಕ್ಷತ್ರ.  ನನಗೆ ಮಾಟ ಮಂತ್ರ ಮಾಡಿದ್ರೆ ಅವರಿಗೇ ತಿರುಗು ಬಾಣವಾಗಲಿದೆ.  ನಾನು‌ ನಿತ್ಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವರನ್ನು  ಪೂಜಿಸುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ. 

loader