ರಾಹುಲ್ ಗಾಂಧಿ ಟೀಕೆಗೆ ಗೌಡ್ರು ಗರಂ

First Published 25, Mar 2018, 6:02 PM IST
JDS Leader Slams Rahul Gandhi
Highlights

ಜೆಡಿಎಸ್ ಪಕ್ಷವನ್ನು ಜೆಡಿಎಸ್ ಸಂಘ ಪರಿವಾರ ಎಂದಿದ್ದಕ್ಕೆ ರಾಹುಲ್ ಗಾಂಧಿ ಮೇಲೆ ದೇವೇಗೌಡ ಗರಂ ಆಗಿದ್ದಾರೆ.

ಬೆಂಗಳೂರು (ಮಾ.25): ಜೆಡಿಎಸ್ ಪಕ್ಷವನ್ನು  ಸಂಘ ಪರಿವಾರ ಎಂದಿದ್ದಕ್ಕೆ ರಾಹುಲ್ ಗಾಂಧಿ ಮೇಲೆ ದೇವೇಗೌಡ ಗರಂ ಆಗಿದ್ದಾರೆ.

ಚೀಟಿಯಲ್ಲಿ ಬರೆದು ಕೊಟ್ಟು ರಾಹುಲ್ ಗಾಂಧಿ ಮೂಲಕ ಕಾಂಗ್ರೆಸ್  ಈ ರೀತಿ ಹೇಳಿಕೆ ನೀಡಿದೆ. ರಾಹುಲ್ ಗಾಂಧಿಯದ್ದು ಅತಿರೇಕದ ವರ್ತನೆ. ದೇಶದಲ್ಲಿ ಎಲ್ಲಿದೆ ಕಾಂಗ್ರೆಸ್ ಪಕ್ಷದ ಶಕ್ತಿ? ಜಾತ್ಯತೀತತೆ ಬಗ್ಗೆ ಪ್ರಶ್ನಿಸುವ ಯೋಗ್ಯತೆ ನಿಮಗಿದೆಯಾ ಎಂದು ರಾಹುಲ್ ಗಾಂಧಿ ವಿರುದ್ಧ ಎಚ್.ಡಿ.ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ  ಸಿದ್ದರಾಮಯ್ಯ ವಿರುದ್ಧ ಕೂಡಾ ವಾಗ್ದಾಳಿ ನಡೆಸಿದ್ದಾರೆ.  ಕುಮಾರಸ್ವಾಮಿ ಸಿಎಂ ಆಗುತ್ತಾರೆಂದು ಸಿದ್ದರಾಮಯ್ಯ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಡಿಸಿಎಂ ಹುದ್ದೆ ಕೊಡಿಸಿದ್ದು ಜೆಡಿಎಸ್ ಪಕ್ಷ. ಈಗ ರಾಹುಲ್ ಗಾಂಧಿ ಕೈಗೆ ಚೀಟಿ ಕೊಟ್ಟು ಟೀಕೆ ಮಾಡಿಸುತ್ತಾರೆ ಎಂದು ಸಿದ್ದರಾಮಯ್ಯ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅವನತಿಗೆ ಸಾಕ್ಷಿಯಾಗಲಿದೆ ಕರ್ನಾಟಕ ರಾಜ್ಯ  ಎಂದಿದ್ದಾರೆ.
 

loader