2010ರಲ್ಲಿ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲಿ ಅವರ ಗೆಲುವಿಗೆ ಚಿಕ್ಕತಿಮ್ಮೇಗೌಡರು ಸಹಕರಿಸಿದ್ದರು. ಆದರೆ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಗೋವಿಂದೇಗೌಡರನ್ನು ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಕೃಷ್ಣಪ್ಪ ಸೋಲಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಗ್ಯಮ್ಮರನ್ನು ಬೆಂಬಲಿಸಿದ್ದ ಚಿಕ್ಕತಿಮ್ಮೇಗೌಡ ತಮ್ಮ ಪ್ರಭಾವ ಬಳಸಿಯೇ ಅವರನ್ನು ಗೆಲ್ಲುವಂತೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸೋಲಿನಿಂದ ಸಿಟ್ಟುಗೊಂಡಿದ್ದ ಮಾಜಿ ಕಾರ್ಫೋರೇಟರ್ ಪ್ರತೀಕಾರ ತೀರಿಸಲು ಸುಪಾರಿ ನೀಡಿ ಚಿಕ್ಕತಿಮ್ಮೇಗೌಡರನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು(ನ.14): ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡ ಕೊಲೆ ಪ್ರಕರಣದಲ್ಲಿ JDS ಮುಖಂಡ ಮಾಜಿ ಕಾರ್ಪೋರೇಟರ್ ಕೈವಾಡ ಇರುವ ಆರೋಪ ಕೇಳಿ ಬಂದಿದೆ.
ನವೆಂಬರ್ 7 ರಂದು ಹೆಗ್ಗನಹಳ್ಳಿಯಲ್ಲಿ ಮೂವರು ದುಷ್ಕರ್ಮಿಗಳು ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡನನ್ನು ಚಾಕುವಿನಿಂದ ಿರಿದು ಕೊಲೆಗೈದಿದ್ದರು. ಆದರೀಗ ಈ ಕೊಲೆಯ ಹಿಂದೆ ಜೆಡಿಎಸ್ ಮುಖಂಡ, ಮಾಜಿ ಕಾರ್ಪೋರೇಟರ್ ಗೋವಿಂದೇಗೌಡ ಹಾಗೂ ಪತ್ನಿ ವರಲಕ್ಷ್ಮಿ ಕೈವಾಡ ಇದೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.
2010ರಲ್ಲಿ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಸಂದರ್ಭದಲ್ಲಿ ಅವರ ಗೆಲುವಿಗೆ ಚಿಕ್ಕತಿಮ್ಮೇಗೌಡರು ಸಹಕರಿಸಿದ್ದರು. ಆದರೆ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಗೋವಿಂದೇಗೌಡರನ್ನು ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಕೃಷ್ಣಪ್ಪ ಸೋಲಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಗ್ಯಮ್ಮರನ್ನು ಬೆಂಬಲಿಸಿದ್ದ ಚಿಕ್ಕತಿಮ್ಮೇಗೌಡ ತಮ್ಮ ಪ್ರಭಾವ ಬಳಸಿಯೇ ಅವರನ್ನು ಗೆಲ್ಲುವಂತೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸೋಲಿನಿಂದ ಸಿಟ್ಟುಗೊಂಡಿದ್ದ ಮಾಜಿ ಕಾರ್ಫೋರೇಟರ್ ಪ್ರತೀಕಾರ ತೀರಿಸಲು ಸುಪಾರಿ ನೀಡಿ ಚಿಕ್ಕತಿಮ್ಮೇಗೌಡರನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕೊಲೆಯಾದ ಬಳಿಕ ಆರೋಪಿಗಳಿಬ್ಬರೂ ತಲೆ ಮರೆಸಿಕೊಂಡಿದ್ದು, ಕುಟುಂಬಸ್ಥರು ದೂರು ನೀಡಿದರೂ ಪೊಲೀಸರು ಮಾತ್ರ ಇನ್ನೂ ವಿಚಾರಣೆ ನಡೆಸಿಲ್ಲ.