ಇನ್ನೆಷ್ಟು ದಿನ ನಿನ್ನ ಆರ್ಭಟ ನಡೆಯುತ್ತೆ ನೋಡ್ತೀನಿ ಎಂದು ಗೌಡ್ರು ಗುಡುಗಿದ್ದು ಯಾರಿಗೆ?

First Published 1, Apr 2018, 3:37 PM IST
JDS Leader Deve Gowda Slams CM Siddaramaiah
Highlights

ನನ್ನ ಗರಡಿಯಲ್ಲಿ ಬೆಳೆದ ಸಿ.ಎಂ. ನಮ್ಮ ಪಕ್ಷವನ್ನೆ ಮುಗಿಸ್ತೀನಿ ಅಂತಾನೆ. ಅದು ಯಾವತ್ತು ಸಾಧ್ಯವಾಗಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.  

ಬೆಂಗಳೂರು (ಏ. 01): ನನ್ನ ಗರಡಿಯಲ್ಲಿ ಬೆಳೆದ ಸಿ.ಎಂ. ನಮ್ಮ ಪಕ್ಷವನ್ನೆ ಮುಗಿಸ್ತೀನಿ ಅಂತಾನೆ. ಅದು ಯಾವತ್ತು ಸಾಧ್ಯವಾಗಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.  

ಕುಮಾರಸ್ವಾಮಿ ಜೊತೆ ಇದ್ದು ನಾಗಮಂಗಲ ನಾಯಕರು ಪುಟ್ಟರಾಜುರನ್ನು ಎರಡು ಬಾರಿ ಸೋಲಿಸಿದ್ದಾರೆ.  ನನಗೆ ಜಿಲ್ಲೆಯಲ್ಲಿ ಸಮರ್ಥ ನಾಯಕತ್ವ ಅಗತ್ಯ ಬೇಕಿದೆ. ಅದಕ್ಕಾಗಿ ಪುಟ್ಟರಾಜುರನ್ನು ಸಂಸದ ಸ್ಥಾನದಿಂದ ಶಾಸಕ ಸ್ಥಾನಕ್ಕೆ ಕರೆ ತರುತ್ತಿದ್ದೇನೆ.  ಜಿಲ್ಲೆಯ ನಾಯಕತ್ವಕ್ಕಾಗಿ ಕುಮಾರಸ್ವಾಮಿ‌ ಜೊತೆಯಲ್ಲಿದ್ದ ಮಹಾನ್ ನಾಯಕರು ಪುಟ್ಟರಾಜುಗೆ ಚೂರಿ ಹಾಕಿದ್ದಾರೆ ಎಂದು ಚೆಲುವರಾಯಸ್ವಾಮಿ ಹೆಸರನ್ನು ಹೇಳದೆ  ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ. 

ಇಂದಿರಾ ಕ್ಯಾಂಟಿನ್ ವಿರುದ್ದ  ಕೂಡ ದೇವೇಗೌಡ್ರು ಟಾಂಗ್ ನೀಡಿದ್ದಾರೆ.  ನಮ್ಮ  ರೈತರು ಯಾರೂ  ಹಸಿದು ಬಂದು ಅನ್ನ ಕೇಳಿಲ್ಲ.  ರೈತರ ಬೆಳೆಗೆ ನೀರು ಕೊಟ್ರೆ ಸಾಕು.  ನಮ್ಮ ರೈತ ಜನರು ಚಿನ್ನ ತೆಗಿತಾರೆ.  ನಿಮ್ಮ ಭಾಗ್ಯ, ಇಂದಿರಾ ಕ್ಯಾಂಟೀನ್ ಯಾರಿಗೆ? ಬೇಕು ಎಂದಿದ್ದಾರೆ. 

ಸಿಎಂ ಸಿದ್ದರಾಮಯ್ಯ ಲಿಂಗಾಯಿತ ಧರ್ಮ ಒಡೆದು ರಾಜಕೀಯ ಮಾಡ್ತಿದ್ದಾರೆ.  ಇನ್ನೆಷ್ಟು ದಿನ ನಿನ್ನ ಆರ್ಭಟ ನಡೆಯುತ್ತಿದೆ ನೋಡ್ತೀನಿ.  ನಿಮ್ಮ ಎಲ್ಲಾ ಆರ್ಭಟಕ್ಕೆ ರಾಜ್ಯದ ಜನರು  ತೆರೆ ಎಳೆಯಲಿದ್ದಾರೆ.  ಈ ಬಾರಿ ಜಿಲ್ಲೆಯ 7 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದ್ದಾರೆ.  ನಿಜವಾಗಿ‌ ನನಗೆ  ನಂಬಿಕೆ ಭರವಸೆ ಇದೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜೆಡಿಎಸ್ ಸರ್ಕಾರ ಬರಲಿದೆ.  ಮುಂದಿನ ನಮ್ಮ ಜೆಡಿಎಸ್ ಸರ್ಕಾರದಲ್ಲಿ ಜಿಲ್ಲೆಯವru  ಮಂತ್ರಿಯಾಗಿರ್ತಾರೆನ್ನುವ ಮೂಲಕ ಪುಟ್ಟರಾಜು ಸಚಿವ ಸ್ಥಾನ ಕೊಡುವ  ಬಗ್ಗೆ ದೇವೇಗೌಡ್ರು ಹೇಳಿದ್ದಾರೆ. 
 

loader