ರಾಹುಲ್ ಗಾಂಧಿಯನ್ನೇ ನನ್ನ ವಿರುದ್ಧ ಕಣಕ್ಕಿಳಿಸಿ: ಸಿಎಂಗೆ ರೇವಣ್ಣ ಸವಾಲು

First Published 1, Apr 2018, 3:14 PM IST
JDS Leader Challenges CM Siddaramaiah
Highlights

 ದೇವೇಗೌಡರ ಮಕ್ಕಳನ್ನು ಸೋಲಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ  ಫುಲ್ ಗರಂ ಆಗಿದ್ದಾರೆ. 

ಹಾಸನ (ಏ. 01):  ದೇವೇಗೌಡರ ಮಕ್ಕಳನ್ನು ಸೋಲಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ  ಫುಲ್ ಗರಂ ಆಗಿದ್ದಾರೆ. 

ರಾಹುಲ್ ಗಾಂಧಿಯನ್ನೇ ನನ್ನ ವಿರುದ್ಧ ಕಣಕ್ಕಿಳಿಸಿ.  ನನ್ನ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸಿದರೂ ನನಗೆ ಯಾವುದೇ ಭಯ ಇಲ್ಲ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.  ಸರ್ಕಾರಿ ಅಧಿಕಾರಿಗೆ ಕಾಂಗ್ರೆ ಸ್ ಟಿಕೆಟ್ ಕೊಡುತ್ತೇನೆಂದಿರುವ ಸಿಎಂ ಸಿದ್ದರಾಮಯ್ಯ  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡಗೆ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ.  ಅವರ ರಾಜೀನಾಮೆ ಅಂಗೀಕಾರವಾಗದಿದ್ದರೂ ಕ್ಷೇತ್ರದಲ್ಲಿ ಬಾಡೂಟ ಹಾಕಿಸಿ, ಹಣ ಹಂಚಿಕೆ ಮಾಡಿದ್ದಾರೆ ಎಂದು  ಮಂಜೇಗೌಡ ವಿರುದ್ಧ  ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. 

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸದಿದ್ದರೆ ಧರಣೆ ನಡೆಸುವುದಕ್ಕೂ ನಾನು ಸಿದ್ಧ.  ರಾಜ್ಯ ಚುನಾವಣಾ ಆಯೋಗದ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ  ಎಚ್.ಡಿ.ರೇವಣ್ಣ.  ಹೊಳೆನರಸೀಪುರ ಕ್ಷೇತ್ರಕ್ಕೆ ಮಂಜೇಗೌಡಗೆ ಟಿಕೆಟ್ ಭರವಸೆ ನೀಡಿರುವ ಸಿದ್ದರಾಮಯ್ಯ  ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು, ನೀನು ಗೆಲ್ಲು ಎಂದು ಮಂಜೇಗೌಡರಿಗೆ  ಹೇಳಿದ್ದರು. ಸಿಎಂ ಮಾತಿನಿಂದ ಕೆರಳಿದ  ರೇವಣ್ಣ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 

loader