ಬೆಂಗಳೂರು : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟದ ಜೆಡಿಎಸ್ ನಾಯಕರಿಗೆ ಪಕ್ಷದಿಂದ ಖಡಕ್ ಸಂದೇಶ ರವಾನಿಸಲಾಗಿದೆ. 

ಜೆಡಿಎಸ್ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮುಖಂಡರು, ಪಕ್ಷದ ನಾಯಕರು ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದೆಂದು ತೀರ್ಮಾನಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರೊಂದಿಗೆ ಚರ್ಚೆ ಮಾಡಿ  ಚರ್ಚೆಯಲ್ಲಿ, ಪಕ್ಷದ ವಕ್ತಾರರೆಂದು ಪಾಲ್ಗೊಳ್ಳುವುದಕ್ಕೆ ನಿರ್ಭಂದಿಸಲಾಗಿದೆ. 

ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡಬಾರದು. ಈ ಆದೇಶ ಉಲ್ಲಂಘನೆ ಮಾಡಬಾರದು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣ್ ತಿಳಿಸಿದ್ದಾರೆ.

ದೇವೇಗೌಡ, ನಿಖಿಲ್‌ ಸೋಲಿಗೆ ಮೈತ್ರಿಯೇ ಕಾರಣ: ಜೆಡಿಎಸ್ ನಾಯಕ