Asianet Suvarna News Asianet Suvarna News

ಜೆಡಿಎಸ್‌ಗೆ ಕೊನೆಗೂ ಹೊಸ ಸಾರಥಿ..!

ಎಚ್. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸುವಂತೆ ದೇವೇಗೌಡರಿಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ರಾಜೀನಾಮೆ ಅಂಗೀಕರಿಸದಿದ್ದರೆ ಶಾಸಕ ಸ್ಥಾನಕ್ಕೂ ರಿಸೈನ್ ಮಾಡಬೇಕಾಗುತ್ತೆ ಎಂದು ಪರೋಕ್ಷವಾಗಿ ಬೆದರಿಸಿದ್ದರು. ಇದ್ರಿಂದ ಜೆಡಿಎಸ್ ಗೆ ಹೊಸ ಸಾರಥಿಯನ್ನು ನೇಮಕ ಮಾಡಲು ದೊಡ್ಡಗೌಡ್ರು ನಿರ್ಧರಿಸಿದ್ದಾರೆ. 

JDS has finally decided to appoint its new State President
Author
Bengaluru, First Published Jun 24, 2019, 6:39 PM IST

ಬೆಂಗಳೂರು, [ಜೂ.24]: ಜೆಡಿಎಸ್ ಕೊನೆಗೂ ತನ್ನ ಹೊಸ ಸಾರಥಿಯನ್ನು ನೇಮಕ ಮಾಡಲು ನಿರ್ಧರಿಸಿದ್ದು, ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಮಾಹಿತಿ ನೀಡಿದ್ದಾರೆ.

ಇಂದು [ಸೋಮವಾರ] ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, 3-4 ದಿನಗಳಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡ್ತೀನಿ. ವಿಶ್ವನಾಥ್ ಅವರ ರಾಜೀನಾಮೆ ಅಂಗೀಕಾರ ಮಾಡೊಲ್ಲ. ಆದ್ರೆ, ವಿಶ್ವನಾಥ್ ಅವರಿಂದಲೇ ಹೊಸ ಅಧ್ಯಕ್ಷರಿಗೆ ಬಾವುಟ ಕೊಡಿಸಿ ಅಧಿಕಾರ ಹಸ್ತಾಂತರ ಮಾಡ್ತೀನಿ ಎಂದು ಹೇಳಿದರು.

ಜೆಡಿಎಸ್ ಮುಂದಿನ ರಾಜ್ಯಾಧ್ಯಕ್ಷ ಯಾರು?

ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ, ಅವರ ಹೇಳಿಕೆ ತಪ್ಪಲ್ಲ. ಆದ್ರೆ ಒಬ್ಬರಿಗೆ ಒಂದೇ ಹುದ್ದೆ ಅಂತ ಪಕ್ಷದಲ್ಲಿ ನಿರ್ಧಾರ ಆಗಿದೆ. ಈ ಹಿಂದೆ ನಾನೇ ರಾಜೀನಾಮೆ ನೀಡಿ ಇಬ್ರಾಹಿಂಗೆ ಸ್ಥಾನ ಕೊಟ್ಟಿದ್ದೆ. ಹೀಗಾಗಿ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದನ್ನು ತಳ್ಳಿಹಾಕಿದರು. 

ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಿಂಗಳುಗಳೇ ಕಳೆದಿದ್ದು, ಇದುವರೆಗೂ ಹಳ್ಳಿ ಹಕ್ಕಿ ರಾಜೀನಾಮೆಯನ್ನು ದೇವೇಗೌಡ್ರು ಅಂಗೀಕರಿಸಿಲ್ಲ. ಬದಲಾಗಿ ಅವರನ್ನೇ ಮುಂದುವರೆಸಲು ನಾನಾ ರೀತಿಯ ಕಸರತ್ತು ಸಹ ಮಾಡಿದರು.

ಆದ್ರೆ, ಇದ್ಯಾವುದಕ್ಕೆ ಜಗ್ಗದ ವಿಶ್ವನಾಥ್, ರಾಜೀನಾಮೆ ಅಂಗೀಕರಿಸಿ. ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗುತ್ತೆ ಎಂದು ಪರೋಕ್ಷವಾಗಿ ದೇವೇಗೌಡರಿಗೆ ಬೆದರಿಕೆ ಹಾಕಿದ್ದರು. 

ಮಧುಬಂಗಾರಪ್ಪ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಎಲ್ಲಾ ಸಾಧ್ಯತೆಗಳಿವೆ. 

Follow Us:
Download App:
  • android
  • ios