ರಾಜ್ಯಸಭಾ ಚುನಾವಣೆ : 1 ಸ್ಥಾನ ಕೇಳಿದ ಜೆಡಿಎಸ್

First Published 2, Mar 2018, 12:01 PM IST
JDS Ask 1 ticket For Rajya Sabha Election
Highlights

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್ ಅನ್ನು ಆಗ್ರಹಿಸಲಾಗಿದೆ. ಆದರೆ, ನಾವೇನು ಅವರಲ್ಲಿ ಭಿಕ್ಷೆ ಕೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹುಬ್ಬಳ್ಳಿ: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್ ಅನ್ನು ಆಗ್ರಹಿಸಲಾಗಿದೆ. ಆದರೆ, ನಾವೇನು ಅವರಲ್ಲಿ ಭಿಕ್ಷೆ ಕೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯದ ಶಾಸಕರ ಬಲವನ್ನು ನೋಡಿದರೆ ಕಾಂಗ್ರೆಸ್‌ಗೆ ಎರಡು, ಬಿಜೆಪಿಗೆ ಒಂದು ಸ್ಥಾನ ದಕ್ಕಲಿದೆ.

ಉಳಿದಿರುವ ಮತ್ತೊಂದು ಸ್ಥಾನ ನ್ಯಾಯಯುತವಾಗಿ ಜೆಡಿಎಸ್‌ಗೆ ಬರಬೇಕು. ಆದರೆ ಕೆಲವರು ಭಿನ್ನಮತ ಪ್ರದರ್ಶಿಸಿ ಹಿಂದೆ ಮೋಸ ಮಾಡಿದ್ದುಂಟು. ಹೀಗಾಗಿ ಕಾಂಗ್ರೆಸ್‌ಗೆ ಒಂದು ಸ್ಥಾನ ಬಿಟ್ಟು ಕೊಡುವಂತೆ ಕೇಳಲಾಗಿದೆ. ನಾವೇನು ಅವರಲ್ಲಿ ಭಿಕ್ಷೆ ಕೇಳಿಲ್ಲ. ನಮಗೆ ನ್ಯಾಯಯುತವಾಗಿ ಆ ಒಂದು

ಸ್ಥಾನ ಬರಬೇಕಿದೆ. ಒಂದು ವೇಳೆ ಮೂರೂ ಸ್ಥಾನಕ್ಕೆ ಕಾಂಗ್ರೆಸ್‌ನವರೇ ಸ್ಪರ್ಧಿಸಿದರೆ ನಮಗೂ ಒಂದು ಕಾಲ ಬರುತ್ತದೆ ಎಂದು ಸುಮ್ಮನಿರುತ್ತೇವೆ. ಸಮಯ ಬಂದಾಗ ಸೂಕ್ತ ಉತ್ತರ ಕೊಡುತ್ತೇವೆ ಎಂದು ನುಡಿದರು.

loader