ಬಿಎಸ್’ಪಿ’ಯೊಂದಿಗೆ ಜೆಡಿಎಸ್ ಮೖತ್ರಿ

ಬೆಂಗಳೂರು(ಫೆ.08): ವಿಧಾನಸಭಾ ಚುನಾವಣೆ ಹಿನ್ನೆಲೆ ದಲಿತರ ಮತ ಸೆಳೆಯಲು ಜೆಡಿಎಸ್​ ತಂತ್ರ ರೂಪಿಸಿದ್ದು ಬಿಎಸ್’ಪಿ ಜೊತೆ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಜೆಡಿಎಸ್’ನ ಡ್ಯಾನಿಷ್ ಅಲಿ, ಬಿಎಸ್’ಪಿ ಸತೀಶ್ ಚಂದ್ರ ಮಿಶ್ರಾ ಜಂಟಿ ಸುದ್ದಿಗೋಷ್ಠಿ ನಡೆಸಿ ಫೆಬ್ರವರಿ 17ರಿಂದ ಕರ್ನಾಟಕದಲ್ಲಿ ಬಿಎಸ್’ಪಿ ಅಧ್ಯಕ್ಷೆ ಮಾಯಾವತಿ ಅವರು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 224ರ ಪೈಕಿ 20 ಕ್ಷೇತ್ರಗಳಲ್ಲಿ ಬಿಎಸ್’ಪಿ ಬೆಂಬಲಿಸಲಿದ್ದು,ಒಕ್ಕಲಿಗ ಮತಗಳ ಜತೆಗೆ ದಲಿತ ಮತಗಳನ್ನು ಸೆಳೆಯುವುದಕ್ಕೆ ಈ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

--