ಬಿಬಿಎಂಪಿ ಉಪಚುನಾವಣೆ : ಜೆಡಿಎಸ್ ಜಯಭೇರಿ

JD(S) candidate Aishwarya BN wins Binnypet bypoll
Highlights

  • ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಗೆಲುವು 
  • ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಜಿ  ವಿರುದ್ಧ 1945 ಮತಗಳಿಂದ ಜಯ

ಬೆಂಗಳೂರು(ಜೂ.20): ಬಿಬಿಎಂಪಿಯ ಬಿನ್ನಿಪೇಟೆ ವಾರ್ಡಿನ 121ರ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಜಿ  ವಿರುದ್ಧ 1945 ಮತಗಳಿಂದ ಐಶ್ವರ್ಯ ಜಯಗಳಿಸಿದ್ದಾರೆ.

ವಾರ್ಡ್‌ನ ಸದಸ್ಯರಾಗಿದ್ದ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜೂನ್ 18ರಂದು ಚುನಾವಣೆ ನಡೆದಿತ್ತು.ಐಶ್ವರ್ಯಾ ಅವರು ಮಹದೇವಮ್ಮ ಅವರ ಪುತ್ರಿಯಾಗಿದ್ದು, ತಮ್ಮ ತಾಯಿ ನಿಧನದಿಂದ ತೆರವಾಗಿದ್ದ ಸ್ಥಾನದಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸಿನಿಂದ ವಿದ್ಯಾ ಶಶಿಕುಮಾರ್  ಸ್ಪರ್ಧಿಸಿದ್ದರು. ಜೂನ್ 18ರ ಚುನಾವಣೆಯಲ್ಲಿ ಶೇ.43.54ರಷ್ಟು ಮತದಾನವಾಗಿ 15,051 ಮತಗಳು ಚಲಾವಣೆಯಾಗಿತ್ತು.

loader