Asianet Suvarna News Asianet Suvarna News

ಶಾಸ್ತ್ರಕ್ಕೆ ಸವಾಲ್ : ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಜಯಲಲಿತಾ ಅಂತ್ಯಸಂಸ್ಕಾರ

ಜಯಲಲಿತಾ ಅಂತ್ಯಸಂಸ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಐಯ್ಯಂಗಾರ್ ಶಾಸ್ತ್ರದಂತೆ ಅಮ್ಮಾ ಅಂತ್ಯಸಂಸ್ಕಾರ ನಡೆಯುತ್ತೆ ಅಂತಿದ್ದವರಿಗೆ ಶಾಕ್ ಆಗಿದೆ. ಯಾಕೆಂದರೆ, ಆಪ್ತ ಗೆಳೆತಿ ಶಶಿಕಲಾ ಮುಂದೆ ನಿಂತು ಎಲ್ಲಾ ಕ್ರಿಯಾದಿಗಳನ್ನ ನೆರವೇರಿಸಿದ್ದಾರೆ. ಜೊತೆಗೆ ದಹನ ಬದಲು ಪಾರ್ಥಿವ ಶರೀರವನ್ನು ಹೂಳಿರುವುದು ಕೂಡ ಶಾಸ್ತ್ರಕ್ಕೆ ಸವಾಲ್ ಎಂದೇ ಭಾವಿಸಲಾಗಿದೆ..

Jayas Funeral Ceremony Is a challenge to ayyengar tradition

ಚೆನ್ನೈ(ಡಿ.07): ಜಯಲಲಿತಾ ಅಂತ್ಯಸಂಸ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಐಯ್ಯಂಗಾರ್ ಶಾಸ್ತ್ರದಂತೆ ಅಮ್ಮಾ ಅಂತ್ಯಸಂಸ್ಕಾರ ನಡೆಯುತ್ತೆ ಅಂತಿದ್ದವರಿಗೆ ಶಾಕ್ ಆಗಿದೆ. ಯಾಕೆಂದರೆ, ಆಪ್ತ ಗೆಳೆತಿ ಶಶಿಕಲಾ ಮುಂದೆ ನಿಂತು ಎಲ್ಲಾ ಕ್ರಿಯಾದಿಗಳನ್ನ ನೆರವೇರಿಸಿದ್ದಾರೆ. ಜೊತೆಗೆ ದಹನ ಬದಲು ಪಾರ್ಥಿವ ಶರೀರವನ್ನು ಹೂಳಿರುವುದು ಕೂಡ ಶಾಸ್ತ್ರಕ್ಕೆ ಸವಾಲ್ ಎಂದೇ ಭಾವಿಸಲಾಗಿದೆ..

ಜಯಾ ಪಾರ್ಥಿವ ಶರೀರ ದಹನ ಮಾಡಲಿಲ್ಲ!: ಸುಡುವ ಬದಲು ಬದಲು ಹೂಳಿದ್ದು ತಪ್ಪಾ?

ಮರೀನಾ ಬೀ'ಚ್‍ನಲ್ಲಿ ನಿನ್ನೆ ಜಯಲಲಿತಾ ಅಂತ್ಯಸಂಸ್ಕಾರ ನಡೆದಿದೆ. ಅಯ್ಯಂಗಾರ್ ಆಗಿರುವ ಜಯಾ ಮೃತದೇಹವನ್ನ ಪನ್ನೀರು ಪೂಸಿ ಮತ್ತು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ದಫನ ಮಾಡಲಾಗಿದೆ. ಮೊದಲು ಜಯಲಲಿತಾ ಅವರ ಜಾತಿ ಯಾವುದು? ಯಾವ ಸಂಪ್ರದಾಯದಂತೆ ವಿಧಿ ವಿಧಾನ ನಡೆಯುತ್ತೆ. ವೈಷ್ಣವ ಸಂಪ್ರದಾಯದಂತೆಯೇ ಎಲ್ಲವೂ ನಡೆಯತ್ತಾ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು. ಆದರೆ, ಮರೀನಾ ಬೀಚ್‌ನಲ್ಲಿ ಆಗಿದ್ದೇ ಬೇರೆ.

ಜಯಲಲಿತಾರವರು ಶ್ರೀವೈಷ್ಣವ ಪಂಥಕ್ಕೆ ಸೇರಿದವರು. ಹಾಗಾಗಿ ಸುಡುವಂತಹ ಸಂಸ್ಕಾರ ಅನುಸರಿಸಲಾಗುತ್ತೆ ಅಂತ ಹೇಳಲಾಗಿತ್ತು. ಆದರೆ ಪಾರ್ಥಿವ ಶರೀರವನ್ನ ಸುಡುವ ಬದಲು ದಫನ ಮಾಡಲಾಗಿದೆ. ಅದರಲ್ಲೂ ಪುರುಷರಿಗೆ ಅವಕಾಶ ಇರಲಿಲ್ಲ. ಜಯಾ ಆಪ್ತ ಗೆಳತಿ ಶಶಿಕಲಾ ಮುಂದೆ ನಿಂತು ಅಂತಿಮ ಕ್ರಿಯಾದಿಗಳನ್ನು ನೆರವೇರಿಸಿ ಕಡೆಗೆ ಮಣ್ಣಿನಲ್ಲಿ ಹೂಳಲಾಯ್ತು.

ಸಂಸ್ಕೃತ ಪಂಡಿತರು ಏನೇ ಹೇಳಲಿ, ರಕ್ತಸಬಂಧಿಗಳಿಗೆ ಅವಕಾಶವೇ ಇಲ್ಲದ ಜಾಗದಲ್ಲಿ ಗೆಳತಿ ಶಶಿಕಲಾ ಹಾಗೂ ಪುತ್ರ ಅಂತಿಮ ವಿಧಿ-ವಿಧಾನಗಳನ್ನ ನೆರವೇರಿಸಿದ್ರು. ಅಂದ್ ಹಾಗೆ ಆತ್ಮಸಖಿಯ ಅಂತ್ಯಕ್ರಿಯೆಗೆ ಶಾಸ್ತ್ರಗಳಲ್ಲಿ ಕೆಲವೊಂದು ವಿಧಾನಗಳಿವೆ. ಆ ಪ್ರಕಾರ ಐಯ್ಯಂಗಾರಿ ಮಹಿಳೆ ಜಯಲಲಿತಾ ಅವರನ್ನ ಸುಡಬೇಕಿತ್ತು. ಹಾಗಾಗಲಿಲ್ಲ. ಬದಲಾಗಿ ಹೂಳಲಾಗಿದೆ. ಇದು ತಪ್ಪು, ಕೇಡಿನ ಸೂಚನೆ ಎನ್ನುವ ಮಾತು ಕೇಳಿ ಬರುತ್ತಿದೆ. ಒಟ್ನಲ್ಲಿ ಹೆಣ್ಣಿಗೆ ಹೆಣ್ಣು ಸಂಸ್ಕಾರ ನಡೆಸುವುದು ಶಾಸ್ತ್ರ ಸಮ್ಮತವೇ? ಅಂತಿಮ ವಿಧಿ ವಿಧಾನ ಹೆಣ್ಣೇ ನೆರವೇರಿಸುವುದು ಎಷ್ಟು ಸರಿ ಎನ್ನುವುದೇ ಯಕ್ಷ ಪ್ರಶ್ನೆ..

 

Latest Videos
Follow Us:
Download App:
  • android
  • ios