ಜಯಾ ಸಾವನ್ನಪ್ಪಿ 2 ತಿಂಗಳುಗಳ ಬಳಿ ಸಾವಿನ ರಹಸ್ಯಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಖುದ್ದು AIADMK ಪಕ್ಷದ ಮಾಜಿ ಶಾಸಕರೊಬ್ಬರು ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಚೆನ್ನೈ(ಫೆ.07): ಜಯಾ ಸಾವನ್ನಪ್ಪಿ 2 ತಿಂಗಳುಗಳ ಬಳಿ ಸಾವಿನ ರಹಸ್ಯಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಖುದ್ದು AIADMK ಪಕ್ಷದ ಮಾಜಿ ಶಾಸಕರೊಬ್ಬರು ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ.
ಜಯಾ ಸಾವಿನ ಕುರಿತಾಗಿ ಮಾತನಾಡಿದ AIADMK ಮಾಜಿ ಶಾಸಕ ಪಾಂಡಿಯನ್ ಜಯಾರನ್ನು ಅವರ ಮನೆ ಮೇಲಿನಿಂದ ತಳ್ಳಿ ಮೊದಲೇ ಕೊಲೆ ಮಾಡಿದ್ದರು. ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತೋರಿಕೆಗೆ ಆಸ್ಪತ್ರೆಗೆ ದಾಖಲಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ಕುರಿತಾಗಿ ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
'ಜಯಲಲಿತಾರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಮೇಲಿನಿಂದ ತಳ್ಳಿದ್ದರು. ಅನುಮಾನ ಬರುತ್ತೆಂದು ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜಯಲಲಿತಾರದ್ದು ಸಹಜ ಸಾವಲ್ಲ, ಅದೊಂದು ಹತ್ಯೆ. ಈ ಕುರಿತಾಗಿ ಸಮಗ್ರ ತನಿಖೆ ಕೈಗೊಳ್ಳಿ ' ಎಂದು ಪಾಂಡಿಯನ್ ಆಗ್ರಹಿಸಿದ್ದಾರೆ.
