ಚೆನ್ನೈ[ಸೆ.12]: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟು ವರ್ಷಗಳೇ ಕಳೆದಿದ್ದರೂ, ಅಲ್ಲಿನ ಜನರಿಗೆ ಎಐಎಡಿಎಂಕೆ ನಾಯಕರಿಗೆ ಇನ್ನೂ ಜಯಾ ಮೇಲಿನ ನಿಷ್ಠೆ, ಭಕ್ತಿ ಕಡಿಮೆಯಾಗಿಲ್ಲ.

ಇದಕ್ಕೆ ಉದಾಹರಣೆ ಎಂಬಂತೆ ಎಐಎಡಿಯಂಕೆ ನಾಯಕ ಭವಾನಿ ಶಂಕರ್‌ ಎಂಬಾತ ತನ್ನ ಪುತ್ರನ ಮದುವೆಯನ್ನು ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸಮಾಧಿ ಮುಂದೆ ಮಾಡಿ ಸ್ವಾಮಿನಿಷ್ಠೆ ಮೆರೆದಿದ್ದಾನೆ.

ಫಲ ಪುಷ್ಪಗಳಿಂದ ಸಿಂಗರಿಸಲಾದ ಸಮಾಧಿ ಮುಂದೆ ಭವಾನಿಶಂಕರ್‌ರ ಪುತ್ರ ಶಾಂಬಶಿವರಾಮನ್‌ ಅಲಿಯಾಸ್‌ ಸತೀಶ್‌, ದೀಪಿಕಾಳನ್ನು ವರಿಸಿದ್ದಾನೆ. ಅಲ್ಲದೇ ನವ ದಂಪತಿಗಳು ಸಮಾಧಿಗೆ ಸುತ್ತು ಬಂದು ಸಪ್ತಪದಿಯೂ ತುಳಿದಿದ್ದಾರೆ.

ಶಾಸೊತ್ರೕಸ್ತ್ರವಾಗಿ ಮದುವೆ ಕಾರ್ಯಗಳು ನಡೆದಿದ್ದು, ಸತಿ ಪತಿಗಳು ಜಯಾ ಸಮಾಧಿಗೆ ಆರತಿ ಎತ್ತಿ ಗೌರವ ಸಲ್ಲಿಸಿದ್ದಾರೆ.