ಜಯಲಲಿತಾ ಆಪ್ತ ಪನ್ನಿರ್ ಸೆಲ್ವಂ ಮುಂದಿನ ಸಿಎಂ ಎಂದು ಹೇಳಲಾಗುತ್ತಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಈ ಬಗ್ಗೆ ಕಸರತ್ತು ನಡೆದಿದೆ. ಅಣ್ಣಾಡಿಎಂಕೆ ಶಾಸಕರನ್ನ ಒಬ್ಬೊಬ್ಬರನ್ನೇ ಕರೆದು ಮುಂದಿನ ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳನ್ನ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಚೆನ್ನೈ(ಡಿ.05): ಕಳೆದ 73 ದಿನಗಳಿಂದ ತಮಿಳುನಾಡು ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಹೃದಯಾಘಾತ ಸಹ ಸಂಭವಿಸಿದ್ದು, ಎಲ್ಲೆಡೆ ಆತಂಕ ಮನೆಮಾಡಿದೆ. ಇದರ ಮಧ್ಯೆಯೇ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಕಸರತ್ತು ನಡೆದಿದೆ.
ಜಯಲಲಿತಾ ಆಪ್ತ ಪನ್ನಿರ್ ಸೆಲ್ವಂ ಮುಂದಿನ ಸಿಎಂ ಎಂದು ಹೇಳಲಾಗುತ್ತಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಈ ಬಗ್ಗೆ ಕಸರತ್ತು ನಡೆದಿದೆ. ಅಣ್ಣಾಡಿಎಂಕೆ ಶಾಸಕರನ್ನ ಒಬ್ಬೊಬ್ಬರನ್ನೇ ಕರೆದು ಮುಂದಿನ ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳನ್ನ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. 136 ಶಾಸಕರು ಪನ್ನೀರ್ ಸೆಲ್ಮಂ ಆಯ್ಕೆಗೆ ಬೆಂಬಲ ಸೂಚಿಸಿದ್ಧಾರೆ ಎಂದು ತಿಳಿದುಬಂದಿದೆ.
