ಆಸ್ಪತ್ರೆಗೆ ಯಾರೊಬ್ಬರನ್ನು ಬಿಡದ ಕಾರಣ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆಸ್ಪತ್ರೆ ಸುತ್ತಮುತ್ತ ನಿಷೇದಾಜ್ಞೆ ಹೊರಡಿಸಲಾಗಿತ್ತು
ಚೆನ್ನೈ(ಅ.26): ಅನಾರೋಗ್ಯದ ಕಾರಣ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನವರ ಪಾಲಿನಅಮ್ಮ, ಮುಖ್ಯಮಂತ್ರಿ ಜಯಲಲಿತಾ ಡಿಸ್ಚಾರ್ಜ್ ಆಗುವ ದಿನಾಂಕವನ್ನು ಸರ್ಕಾರ ಅಧಿಕೃತಗೊಳಿಸಿದೆ.
ಮನೆಯಿಂದ ಆಯತಪ್ಪಿ ಬಿದ್ದ ಕಾರಣ ಸೆ.22 ರಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಯಾರೊಬ್ಬರನ್ನು ಬಿಡದ ಕಾರಣ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆಸ್ಪತ್ರೆ ಸುತ್ತಮುತ್ತ ನಿಷೇದಾಜ್ಞೆ ಹೊರಡಿಸಲಾಗಿತ್ತು. ಆರಂಭದಲ್ಲಿ ಜಯರನ್ನು ನೋಡಲು ಗಣ್ಯ ವ್ಯಕ್ತಿಗಳನ್ನು ಸಹ ಬಿಡುತ್ತಿರಲಿಲ್ಲ. ಕೇವಲ ಮಾಹಿತಿಯಷ್ಟೆ ನೀಡಲಾಗುತ್ತಿತ್ತು.
ಅಮ್ಮನ ಆರೋಗ್ಯಕ್ಕಾಗಿ ತಮಿಳುನಾಡಿನಾದ್ಯಂತ ಅವರ ಅಭಿಮಾನಿಗಳು ಪೂಜೆ, ಪುನಸ್ಕಾರ, ಹಲವು ಹರಕೆಗಳನ್ನು ಹೊತ್ತಿದ್ದರು. ರಾಜ್ಯದ ಸಚಿವರಂತೂಜಯಲಲಿತಾ ಫೋಟೊ ಇಟ್ಟು ಸರ್ಕಾರದ ಸಭೆಗಳನ್ನು ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸ್ವತಃ ಅಮ್ಮನ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರು. ಸಿಂಗಾಪುರದಿಂದ ಕೂಡ ನುರಿತ ವೈದ್ಯರು ಬಂದು ಚಿಕಿತ್ಸೆ ನೀಡಿದ್ದರು.
ಸರ್ಕಾರದ ಮಾಹಿತಿ ನೀಡಿರುವ ಪ್ರಕಾರ ಜಯಲಲಿತಾ ಅವರು ದೀಪಾವಳಿ ನಂತರದ ದಿನ ಅಂದರೆ ನವಂಬರ್ 1ರಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ!
