ತಮಿಳುನಾಡು ಸಿಎಂ ಜಯಲಲಿತಾ ನಿಧನದ ಶಾಕ್`ನಿಂದ ತಮಿಳುನಾಡಿನ ಜನ ಇನ್ನೂ ಹೊರಬಂದಿಲ್ಲ. 75 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ ಜಯಲಲಿತಾ ಡಿಸೆಂಬರ್ 5ರಂದು ಅಸುನೀಗಿದರು. ಅದುವರೆಗೆ ಆಸ್ಪತ್ರೆಯಲ್ಲಿ ಏನೇನಾಗುತ್ತಿತ್ತು ಎಂಬ ಬಗ್ಗೆ ಕಿಂಚಿತ್ತೂ ಜನರಿಗೆ ಗೊತ್ತಾಗಲಿಲ್ಲ. ಇದೀಗ, ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ಕೆಲ ಸಂಗತಿಗಳನ್ನ ಬಿಚ್ಚಿಟ್ಟಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಚೆನ್ನೈ(ಡಿ.09): ತಮಿಳುನಾಡುಸಿಎಂ ಜಯಲಲಿತಾ ನಿಧನದ ಶಾಕ್`ನಿಂದ ತಮಿಳುನಾಡಿನ ಜನ ಇನ್ನೂ ಹೊರಬಂದಿಲ್ಲ. 75 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ ಜಯಲಲಿತಾ ಡಿಸೆಂಬರ್ 5ರಂದು ಅಸುನೀಗಿದರು. ಅದುವರೆಗೆ ಆಸ್ಪತ್ರೆಯಲ್ಲಿ ಏನೇನಾಗುತ್ತಿತ್ತು ಎಂಬ ಬಗ್ಗೆ ಕಿಂಚಿತ್ತೂ ಜನರಿಗೆ ಗೊತ್ತಾಗಲಿಲ್ಲ. ಇದೀಗ, ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ಕೆಲ ಸಂಗತಿಗಳನ್ನ ಬಿಚ್ಚಿಟ್ಟಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ನರ್ಸ್ ಶೀಲಾ ಹೇಳಿದ್ದು..

`ಏನು ಮಾಡಬೇಕೆಂದು ಹೇಳು ನಾನದನ್ನೇ ಮಾಡುತ್ತೇನೆ ಎನ್ನುತ್ತಿದ್ದರು. ನಾವು ಆಕೆ ಇದ್ದ ವಾರ್ಡ್ ಒಳಗೆ ಹೋಗುತ್ತಲೇ ನಮ್ಮ ಕಡೆ ನೋಡಿ ಜಯಲಲಿತಾ ನಗುತ್ತಿದ್ದರು. ನಮ್ಮ ಬಳಿ ಆತ್ಮೀಯತೆಯಿಂದ ಮಾತನಾಡುತ್ತಿದ್ದರು. ನಾವು ಅವರ ಸುತ್ತ ನಿಂತುಕೊಂಡಾಗ ಕಷ್ಟವಾದರೂ ಆಹಾರ ಸೇವಿಸುತ್ತಿದ್ದರು. ನಮ್ಮೆಲ್ಲರ ೊಬ್ಬೊಬ್ಬರಿಗೆ ಒಂದೊಂದು ತುತ್ತಿನಂತೆ ಊಟ ಮಾಡುತ್ತಿದ್ದರು. ನಾನು, ರೇಣುಕಾ ಮತ್ತು ಸಾಮುಂಡೇಶ್ವರಿ ಅವರಿಗೆ ಫೇವರೇಟ್ ನರ್ಸ್`ಗಳು.

ಆಸ್ಪತ್ರೆಗೆ ಬಂದ ದಿನ ಹೇಗಿತ್ತು..

ಜಯಲಲಿತಾ ಆಸ್ಪತ್ರೆಗೆ ಬಂದ ದಿನ ಹೇಗಿತ್ತು ಎಂಬ ಬಗ್ಗೆ ವೈದ್ಯರೊಬ್ಬರು ವಿವರಿಸಿದ್ದಾರೆ. ಸೆಪ್ಟೆಂಬರ್ 22ರ ರಾತ್ರಿ ಆಸ್ಪತ್ರೆಗೆ ಬಂದಾಗ ಸ್ಯಾಂಡ್`ವಿಚ್ ಕಾಫಿಯನ್ನ ತರುವಂತೆ ಆರ್ಡರ್ ಮಾಡಿದರು. ಅಷ್ಟೇ ಅಲ್ಲ, ನರ್ಸ್`ಗಳಿಗೇ ಟಿಪ್ಸ್ ಕೊಡುತ್ತಿದ್ದ ಜಯಾ, ಹೇರ್`ಸ್ಟೈಲ್ ಬದಲಿಸುವಂತೆ ಜಬರ್ದಸ್ತ್ ಮಾಡಿದ್ದರಂತೆ.