ಆ ಮೂವರು ಸಿಎಂಗಳು ಯಾರು? ತಮಿಳುನಾಡಿನಲ್ಲಿ 3 ದಶಕದ ಬಳಿಕ ಹಿಸ್ಟರಿ ರಿಪಿಟ್ ಆಯ್ತಾ ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಚೆನ್ನೈ(ಡಿ.6): ತಮಿಳುನಾಡಿನಲ್ಲಿ ಮೂವರು ಮುಖ್ಯಮಂತ್ರಿಗಳು ಪದವಿಯಲ್ಲಿದ್ದಾಗಲೇ ವಿಧಿವಶವಾಗಿದ್ದಾರೆ. ಆ ಮೂವರು ಸಾವಿನ ಸುತ್ತವೂ ಹಲವು ಅನುಮಾನಗಳು ಹಾಗೆ ಉಳಿದು ಹೋಗಿದೆ. ಆ ಅನುಮಾನಗಳೇನು ? ಆ ಮೂವರು ಸಿಎಂಗಳು ಯಾರು? ತಮಿಳುನಾಡಿನಲ್ಲಿ 3 ದಶಕದ ಬಳಿಕ ಹಿಸ್ಟರಿ ರಿಪಿಟ್ ಆಯ್ತಾ ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಎಂ ಜಿ ರಾಮಚಂದ್ರನ್ , ಸಿ.ಎನ್. ಅಣ್ಣಾದೊರೈ , ಈಗ ಜೆ . ಜಯಲಲಿತಾ ಈ ಮೂವರು ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಪದವಿಯನ್ನು ಅನುಭವಿಸಿ ಪದವಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ.
ಸೆಪ್ಟೆಂಬರ್ 22ರಂದು ಮಧ್ಯರಾತ್ರಿ ಅದೇ ಅಪೋಲೋ ಆಸ್ಪತ್ರೆ ಸೇರಿದ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಕಿಂಚಿತ್ತೂ ಗುಟ್ಟು ಹೊರಗೆ ಬರದೇ ಪುರಚ್ಚಿ ತಲೈವಿ ಜಯಾಲಲಿತಾ ಮೃತಪಟ್ಟರು.
1969 - ಅಣ್ಣಾದೊರೈ
1987 - ಎಂಜಿಆರ್
2016 - ಜಯಲಲಿತಾ
1984 ತಮಿಳುನಾಡು ಕಂಡ ರಂಗೀನ್ ರಾಜಕಾರಣಿ, ಜನಪ್ರಿಯ ಮುಖ್ಯಮಂತ್ರಿ ಎಂ. ಜಿ . ರಾಮಚಂದ್ರನ್ ಒಂದು ದಿನ ಇದ್ದಕ್ಕಿದ್ದಂತೆ ಅಪೋಲೋ ಆಸ್ಪತ್ರೆಗೆ ದಾಖಲಾದರು. ಎಂಜಿಆರ್ ಉಸಿರಾಟದ ತೊಂದರೆಯಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದ್ರು. ನೆಚ್ಚಿನ ನಾಯಕನಿಗೆ ಏನಾಯಿತು ಎಂಬುದನ್ನು ಜನರಿಂದ ಮರೆ ಮಾಚಲಾಯಿತು. ಇದು ತಮಿಳಿಗರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಅದೇ ಮಾದರಿಯ ಎಲ್ಲಾ ಘಟನೆಗಳು ತಲೈವಿ ಜಯಾಲಲಿತಾ ನಿಧನದ ವೇಳೆಯಲ್ಲಿ ಕಂಡು ಬಂತು.
ಇನ್ನು ದ್ರಾವಿಡ ಹೋರಾಟದ ಹಿನ್ನೆಲೆಯಿಂದ ಅಧಿಕಾರಕ್ಕೆ ಬಂದ ಸಿ.ಎನ್. ಅಣ್ಣಾದೊರೈ ತಮಿಳುನಾಡಿನ ಅಣ್ಣಾ ಎಂದೇ ಪ್ರಸಿದ್ಧರಾಗಿದ್ರು. ಸಿ.ಎನ್. ಅಣ್ಣಾದೊರೈ ಸಿಎಂ ಆಗಿದ್ದಾಗ ಕ್ಯಾನ್ಸರ್ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆಯಲ್ಲಿ ಕೂಡ ಆವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿದೇ ಇದ್ದಿದ್ದರಿಂದ ತಮಿಳುನಾಡಿನ ಜನರು ತಮ್ಮ ನಾಯಕನನ್ನ ನೋಡಬೇಕು ಎಂದು ಆಸ್ಪತ್ರೆ ಮುಂದೆ ಹಗಲಿರುಳೆನ್ನದೇ ಸೇರಿ ಕಣ್ಣೀರು ಸುರಿಸಿದ್ದರು.
ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಅಧಿಕಾರದ ಅವಧಿಯಲ್ಲಿ ಮೂವರು ಸಿಎಂಗಳು ಸಾವನ್ನದ್ದಾರೆ. ಮೂವರು ಸಾವಿನ ಕೊನೆಯವರೆಗೆಗೂ ಅವರ ಆರೋಗ್ಯದ ಬಗ್ಗೆ ವೈದ್ಯರು ಜನರಿಗೆ ಮಾಹಿತಿ ನೀಡಲಿಲ್ಲ. ಮೂವರು ನಾಯಕರ ಶವಸಂಸ್ಕಾರ ಮರೀನಾ ಬೀಚ್ನಲ್ಲಿ ನಲ್ಲಿಯೇ ನೆರವೇರಿದ್ದು ಕೂಡ ಕಾಕತಾಳಿಯ.
ಜೆ.ಎಸ್. ಪೂಜಾರ್, ನ್ಯೂಸ್ಡೆಸ್ಕ್ , ಸುವರ್ಣನ್ಯೂಸ್
