ತೀವ್ರ ಮಧುಮೇಹದಿಂದ ಬಳಲುತ್ತಿರುವ ಜಯಲಲಿತಾ ವರನ್ನು ಈ ಸಂದರ್ಭದಲ್ಲಿ ಶಿಫ್ಟ್​ ಮಾಡುವುದು ಸ್ವಲ್ಪ ಕಷ್ಟ ಎನಿಸಿದರೂ, ಅವರನ್ನು ಸಿಂಗಾಪುರದ ಮೌಂಟ್​ ಎಲಿಜಬತ್​ ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಸಂಪೂರ್ಣವಾಗಿ ಗುಣಮುಖರಾಗ್ತಾರೆ

ಚೆನ್ನೈ(ಅ.8): ತಮಿಳುನಾಡಿನ ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ಆನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಸಿಂಗಾಪುರಕ್ಕೆ ಶಿಫ್ಟ್​ ಮಾಡಿ ಎಂದು ದೆಹಲಿಯಿಂದ ಬಂದಿರುವ ಏಮ್ಸ್​ ವೈದ್ಯರ ತಂಡ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಿದ್ದಾರೆ. ಕಳೆದ 5 ದಿನಗಳ ಹಿಂದೆ ಅಪೋಲೋ ಆಸಅ್ಪತ್ರೆಗೆ ಆಗಮಿಸಿರುವ ದೆಹಲಿ ಏಮ್ಸ್​ನ ಡಾ.ಕಿಲ್ನಾನಿ, ಡಾ.ನಿತೀಶ್​ ನಾಯಕ್​ಮತ್ತು ಡಾ.ಅಂಜನ್​ ತ್ರಿಖಾ ಈ ಸಲಹೆಯನ್ನು ನೀಡಿದ್ದಾರೆ.

ತೀವ್ರ ಮಧುಮೇಹದಿಂದ ಬಳಲುತ್ತಿರುವ ಜಯಲಲಿತಾ ವರನ್ನು ಈ ಸಂದರ್ಭದಲ್ಲಿ ಶಿಫ್ಟ್​ ಮಾಡುವುದು ಸ್ವಲ್ಪ ಕಷ್ಟ ಎನಿಸಿದರೂ, ಅವರನ್ನು ಸಿಂಗಾಪುರದ ಮೌಂಟ್​ ಎಲಿಜಬತ್​ ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಸಂಪೂರ್ಣವಾಗಿ ಗುಣಮುಖರಾಗ್ತಾರೆ ಎಂಬುದನ್ನು ದೆಹಲಿಯ ವೈದ್ಯರ ತಂಡ ತಿಳಿಸಿದ್ದಾರೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ಜಯಲಲಿತಾ ಅವರಿಗೆ ವೆಂಟಿಲೇಟರ್​ನಲ್ಲಿ ಕೊಂಚ ಉಸಿರಾಟವನ್ನು ಕಡಿಮೆ ಮಾಡಿ ನಿಗಾವಹಿಸಿ ಅವರು ಸ್ಪಂದಿಸಿದ್ದೇ ಆದ್ರೆ, ಮುಂದಿನ ಬುಧುವಾರದ ನಂತರ ಜಯಾರನ್ನು ಸಿಂಗಾಪುರದ ಮೌಂಟ್​ ಎಲಿಜಬತ್​ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗುವುದು ಎಂಬ ವಿಚಾರ ತಿಳಿದು ಬಂದಿದೆ.