ಸೋದರ ವರದರಾಜನ್  ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಮೈಸೂರು(ಡಿ.13): ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಜಯಲಲಿತಾ ಅವರನ್ನು ಪುನರ್ ಅಂತ್ಯ ಸಂಸ್ಕಾರ ಮಾಡಲಾಗಿದೆ. ಜಯಲಲಿತಾ ಸೋದರ ವರದರಾಜನ್ ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು.ಜಯಲಲಿತಾ ಆತ್ಮಕ್ಕೆ ಮೋಕ್ಷ ಪ್ರಾಪ್ತಿಗಾಗಿ ಪುನರ್ ಅಂತ್ಯ ಸಂಸ್ಕಾರ ಮಾಡಲಾಗಿದೆ. ಚೆನ್ನೈನಲ್ಲಿ ಡಿ.6 ರಂದು ವೈಷ್ಣವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯದ ಹಿನ್ನೆಲೆಯಲ್ಲಿ ಇಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ವರದರಾಜನ್ ಅವರು ದರ್ಬೆ ಮೂಲಕ ಜಯಲಲಿತಾ ಗೊಂಬೆ ಮಾಡಿ ಅಗ್ನಿ ಸ್ಪರ್ಶ ಮಾಡಿದರು.