ಚೆನ್ನೈ(ಡಿ.16): ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ನಿಗೂಢತೆ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅಮ್ಮನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಜಯಲಲಿತಾ ಅನಾರೋಗ್ಯಕ್ಕೆ ತುತ್ತಾದ ವೇಳೆ ಆಕೆಗೆ ಬದಲಿ ಔಷಧ ಕೊಡಲಾಗಿತ್ತು ಎನ್ನುವ ಆಘಾತಕಾರಿ ಅಂಶವನ್ನ ಇದೀಗ ಅಪೋಲೋ ಆಸ್ಪತ್ರೆ ವೈದ್ಯರು ಬಿಚ್ಚಿಟ್ಟಿದ್ದಾರೆ. ಬಯಲಾಗಿದೆ. ಈ ಬದಲಿ ಔಷಧವೇ ಜಯಲಲಿತಾ ಅವರ ಅನಾರೋಗ್ಯ ಉಲ್ಬಣಗೊಳ್ಳಲು ಕಾರಣ ಎನ್ನಲಾಗಿದೆ.

ನುರಿತ ವೈದ್ಯರು ಹೇಳುವ ಪ್ರಕಾರ, ಕಿಡ್ನಿ ಸಮಸ್ಯೆ ಇದ್ದವರಿಗೆ ಮಾತ್ರೆಗಳನ್ನ ನೀಡಬಾರದು, ಇನ್ಸುಲಿನ್ ಮೂಲಕವೇ ಶುಗರ್ ಕಂಟ್ರೋಲ್ ಮಾಡಬೇಕು. ಆದರೆ, ಮಾತ್ರೆ ಕೊಟ್ಟಿರುವುದು ಕಿಡ್ನಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಿರಬಹುದು ಅಂತಾರೆ.

ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸುವ ಮುನ್ನ ಡಯಾಬಿಟಿಸ್​​ನಿಂದ ಬಳಲುತ್ತಿದ್ದ ಜಯಲಲಿತಾಗೆ ಬದಲಿ ಔಷಧ ಕೊಡಲಾಗಿತ್ತು. ಈ ಔಷಧವೇ ಜಯಲಲಿತಾರ ಅನಾರೋಗ್ಯ ಉಲ್ಬಣಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಜಯಲಲಿತಾ ಸಾವಿನ ಬಳಿಕವೂ ಆಕೆಗಿದ್ದ ಕಾಯಿಲೆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಲ್ಲದೇ, 73 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಜಯಲಲಿತಾರನ್ನು ಭೇಟಿಯಾಗಲು ಶಶಿಕಲಾ ಅವಕಾಶ ನೀಡಿರಲಿಲ್ಲ. ಇವೆಲ್ಲವೂ ಹಲವು ಅನುಮಾನಗಳನ್ನು ಸೃಷ್ಟಿಸಿದೆ.