ಬೆಂಗಳೂರು(ಸೆ.09): ಕಾವೇರಿಗಾಗಿ ಕರ್ನಾಟಕದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ರಾಜ್ಯ ಹೊತ್ತಿ ಉರಿಯುತ್ತಿದೆ. ಆದರೆ ತಮಿಳುನಾಡು ಮಾತ್ರ ಮತ್ತೆ ನೀರು ಬೇಕೆಂದು ಕ್ಯಾತೆ ತೆಗೆದಿದೆ.
ಈಗ ಬಿಟ್ಟಿರುವ 13 ಟಿಎಂಸಿ ನೀರು ಸಾಲೋದಿಲ್ಲ, ಬಾಕಿ ಉಳಿದಿರುವ 61 ಟಿಎಂಸಿ ನೀರು ಬೇಕೆಂದು ತಮಿಳುನಾಡು ಮುಖ್ಯಕಾರ್ಯದರ್ಶಿಯಿಂದ ಇ ಮೇಲ್ ಮೂಲಕ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಜಯಲಲಿತಾ ಅರ್ಜಿ ಸಲ್ಲಿಸಿದ್ದಾರೆ. ಇದು ಸೆ.12ಕ್ಕೆ ನಡೆಯಲಿರುವ ಮೇಲುಸ್ತುವಾರಿ ಸಮಿತಿ ಸಭೆಗೆ ಒತ್ತಡ ತರುವ ತಂತ್ರವಾಗಿದೆ. ಇವರ ಈ ಬೇಡಿಕೆಯಿಂದ ಕರ್ನಾಟಕ ಇನ್ನಷ್ಟು ಸಂಕಷ್ಟಕ್ಕೆ ತುತ್ತಾಗಲಿದೆ.
