ಜಯಾಲಲಿತಾ ಅವರನ್ನು ತಜ್ಞ ವೈದ್ಯರು ತೀವ್ರ ತಪಾಸಣೆ ನಡೆಸುತ್ತಿದ್ದು, ಸದ್ಯದ ಪರಿಸ್ಥಿತಿ ಏನೆಂದು ಇನ್ನಷ್ಟೇ ಖಚಿತವಾಗಬೇಕಿದೆ

ಚೆನ್ನೈ (ಡಿ.04): ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಅವರಿಗೆ ಹೃದಯಘಾತವಾಗಿದೆ ಎಂದು ವರದಿಯಾಗಿದೆ.

ಜಯಾಲಲಿತಾ ಅವರಿಗೆ ಇಂದು ಸಂಜೆ ಹೃದಾಯಾಘಾತ ಸಂಭವಿಸಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂದು ಅಪೋಲೋ ಆಸ್ಪತ್ರೆ ಹೇಳಿದೆ. ಸದ್ಯದ ಪರಿಸ್ಥಿತಿ ಏನೆಂದು ಇನ್ನಷ್ಟೇ ಖಚಿತವಾಗಬೇಕಿದೆ.

ತೀವ್ರ ಜ್ವರ ಹಾಗೂ ನಿರ್ಜಲೀಕರಣ ಟಾದ ಹಿನ್ನೆಯಲ್ಲಿ ಜಯಾ ಅವರು ಸೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಏಮ್ಸ್ ಹಾಗೂ ಲಂಡನ್’ನ ತಜ್ಞ ವೈದ್ಯರನ್ನೊಳಗೊಂಡ ತಂಡವು ಅವರಿಗೆ ಚಿಕಿತ್ಸ್ಎ ನೀಡುತ್ತಿದೆ.

ದಾಖಲಾದ ಬಳಿಕ ನ.13ರಂದು ಮೊದಲ ಬಾರಿಗೆ ಮಾತನಾಡಿದ್ದ ಜಯಾ, ತಾನು ಮರುಜನ್ಮ ಪಡೆದಿರುವುದಾಗಿ ಹೇಳಿದ್ದರು. ಜಯಾ ಚೇತರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ನ.19ರಂದು ಅವರನ್ನು ತೀವ್ರ ನಿಘಾ ಘಟಕದಿಂದ ವಾರ್ಡ್’ಗೆ ಸ್ಥಳಾಂತರಿಸಲಾಗಿತ್ತು.

ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ತಮಿಳುನಾಡು ರಾಜ್ಯಪಾಲರಿಗೆ ಈಗಾಗಲೇ ಮಾತನಾಡಿದ್ದು, ಜಯಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಜಯಾಗೆ ಹೃದಯಾಘಾತ ಸಂಭವಿಸಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಅಪೊಲೋ ಆಸ್ಪತ್ರೆ ಹೊರಗಡೆ ಜನಸ್ತೋಮ ಹರಿದು ಬರುತ್ತಿದೆ.