ಚೆನ್ನೈ (ಅ.01): ತಮಿಳುನಾಡು ಸಿಎಂ ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ, ಗುಣಮುಖರಾಗುತ್ತಿದ್ದಾರೆ ತಮಿಳುನಾಡು ರಾಜಭವನದಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ.
ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ಜಯಾಗೆ ಶುಭಕೋರಿದ್ದಾರೆ.
ಅಪೋಲೋ ಆಸ್ಪತ್ರೆ ವೈದ್ಯರಿಗೆ ಧನ್ಯವಾದ ಹೇಳಿ ಹಣ್ಣು ಕೊಟ್ಟು ಜಯಲಲಿತಾಗೆ ಶುಭ ಹಾರೈಸಿದ್ದಾರೆ.
ರಾಜ್ಯಪಾಲರ ಜೊತೆ ಹಣಕಾಸು ಸಚಿವ ಪನೀರ್ ಸೆಲ್ವಂ ಸೇರಿದಂತೆ ತಮಿಳುನಾಡು ಸರ್ಕಾರದ ಹಲವು ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗುತ್ತಿದೆ.
