‘ಜಯಾ ಬೇಗ ಗುಣಮುಖರಾಗುತ್ತಾರೆ, ಆತಂಕ ಬೇಡ, ಅಪೋಲೋ ಆಸ್ಪತ್ರೆ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ನವದೆಹಲಿ (ಡಿ.05): ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ, ಆತಂಕ ಪಡುವ ವಿಚಾರವಿಲ್ಲವೆಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ.

‘ಜಯಾ ಬೇಗ ಗುಣಮುಖರಾಗುತ್ತಾರೆ, ಆತಂಕ ಬೇಡ, ಅಪೋಲೋ ಆಸ್ಪತ್ರೆ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಏಮ್ಸ್'ನ ತಜ್ಞ ವೈದ್ಯರ ನೆರವು ಕೋರಿದ್ದಾರೆ. ಡಾ. ಖಿಲ್ನಾನಿ, ಡಾ. ತ್ರಿಕಾ, ಡಾ.ನಾರಂಗ್, ಹಾಗೂ ಡಾ. ತಲ್ವಾರ್ ಅವರುಗಳ ತಂಡ ಚೆನ್ನೈ'ಗೆ ಹೊರಡಲಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಜಯಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ಮೋದಿ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾವಹಿಸುತ್ತಿದ್ದಾರೆ.

73 ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯಾಗೆ ನಿನ್ನೆ ಸಂಜೆ ಹೃದಯಾಘಾತವಾಗಿತ್ತು.