ಚೆನ್ನೈ (ಸೆ.16): ಕಾವೇರಿ ನದಿಯಿಂದ ಬಿಡುಗಡೆಯಾಗುವ ನೀರು ಮೆಟ್ಟೂರು ಅಣೆಕಟ್ಟು ಸೇರಲಿದ್ದು ಸಾಂಬಾ ಬೆಳೆಗೆ ನೀರಾವರಿ ಒದಗಿಸಲು ಮೆಟ್ಟೂರು ಡ್ಯಾಂ ನೀರನ್ನು ಬಿಡುವಂತೆ ಸಿಎಂ ಜಯಲಲಿತಾ ಆದೇಶಿಸಿದ್ದಾರೆ.

ಸೆ.20 ರಿಂದ ಮೆಟ್ಟೂರು ಅಣೆಕಟ್ಟಿನಿಂದ ನೀರು ಬಿಡುವಂತೆ ಸೂಚಿಸಿದ್ದೇನೆ. ರೈತರು ಸಾಂಬಾ ಕೃಷಿಗಾಗಿ ನೀರನ್ನು ಬಳಸಿಕೊಳ್ಳಬಹುದು ಎಂದು ಜಯಲಲಿತಾ ಹೇಳಿದ್ದಾರೆ.

ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಮಟ್ಟ 84.76 ಅಡಿಗಳಷ್ಟಿದ್ದು, ಸುಪ್ರೀಂ ಆದೇಶದಂತೆ ಕಾವೇರಿ ನೀರನ್ನು ಬಿಡಲಿದ್ದು ನೀರಿನ ಮಟ್ಟ ಹೆಚ್ಚಾಗಲಿದೆ. ನೈರುತ್ಯ ಮುಂಗಾರು ಸಮಯದಲ್ಲಿ ಇನ್ನಷ್ಟು ನೀರು ಬಿಡಲಿರುವುದನ್ನು ಗಮನದಲ್ಲಿಟ್ಟಿಕೊಂಡು ಮೆಟ್ಟೂರು ಡ್ಯಾಂನಿಂದ ನೀರನ್ನು ಬಿಡಲು ಆದೇಶಿಸಲಾಗಿದೆ ಎಂದು ಜಯಲಲಿತಾ ಹೇಳಿದ್ದಾರೆ.