ಜೊತೆಗೆ  ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಮತ್ತು ಗಣೇಶ ದೇವರಿಗೆ ಚಿನ್ನ ಹಾಗೂ ಬೆಳ್ಳಿ ಕವಚಗಳನ್ನೂ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು.

ಮೈಸೂರು(ಅ.21):  ತಮಿಳುನಾಡು ಸಿಎಂ ಜಯಲಲಿತಾ ಶೀಘ್ರ ಗುಣಮುಖರಾಗಲಿ ಅಂತಾ ಅವರ ಬೆಂಬಲಿಗರು ದೇವರ ಮೊರೆ ಹೋಗುತ್ತಿದ್ದಾರೆ. ಇಂದು ಜಯಲಲಿತಾ ಅವರ ಬೆಂಬಲಿಗರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಬರೋಬ್ಬರಿ ೧ಕೋಟಿ,೬೦ ಲಕ್ಷದ ೭೭ಸಾವಿರದ ಕಾಣಿಕೆಯನ್ನು ದೇವಿಗೆ ಕಾಣಿಕೆ ರೂಪದಲ್ಲಿ ಸಲ್ಲಿಸಿದರು. ಜೊತೆಗೆ ದೇವಸ್ಥಾನದ ಆವರಣದಲ್ಲಿರುವ ಆಂಜನೇಯ ಮತ್ತು ಗಣೇಶ ದೇವರಿಗೆ ಚಿನ್ನ ಹಾಗೂ ಬೆಳ್ಳಿ ಕವಚಗಳನ್ನೂ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು. ಜಯಾ ಪಬ್ಲಿಕೇಷನ್ಸ್ ಮತ್ತು ಕೊಡನಾಡ್ ಎಸ್ಟೇಟ್ ಹೆಸರಿನಲ್ಲಿ ಈ ಕಾಣಿಕೆಯನ್ನು ಸಲ್ಲಿಸಲಾಯಿತು. ಈ ಹಿಂದೆ ಮೈಸೂರಿಗೆ ಜಯಲಲಿತಾ ಬಂದಿದ್ದ ವೇಳೆ ಹರಕೆ ಹೊತ್ತಿದ್ದರು. ಇಂದು ಅವರ ಬೆಂಬಲಿಗರು ಹರಕೆ ತೀರಿಸಿದರು. ಜೊತೆಗೆ ಜಯಾ ಶೀಘ್ರ ಗುಣಮುಖರಾಗಲಿ ಅಂತಾ ಪ್ರಾರ್ಥಿಸಿದರು.